Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಅಲಹಾಬಾದಿನಲ್ಲಿ ಮಾಘ ಮೇಳ ಆರಂಭ:ಸಂಗಮದಲ್ಲಿ ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ

ಅಲಹಾಬಾದ್:  ನಡೆಯುವ ಮಾಘ ಮೇಳ ಉತ್ಸವ ಆರಂಭಗೊಂಡಿದೆ. ಲಕ್ಷಾಂತರ ಯಾತ್ರಿಕರು, ಕೋಟ್ಯಂತರ ಕಲ್ಪವಾಸಿಗಳು ಯಮುನಾ,ಗಂಗಾ, ಸರಸ್ವತಿ ಮೂರೂ ನದಿಗಳು ಒಟ್ಟು ಸೇರುವ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಮಾಘ ಮಾಸದ ಇಡೀ ತಿಂಗಳು, ಹಲವು ಭಕ್ತರು ಇಲ್ಲಿ ಸಂಗಮದ ತೀರದಲ್ಲಿ ತಾತ್ಕಾಲಿಕ ಟೆಂಟ್ ಗಳನ್ನು ಹಾಕಿಕೊಂಡು ನಸುಕಿನಲ್ಲಿ ಎದ್ದು ಸ್ನಾನ ಮಾಡಿ ಇಡೀ ದಿನ ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತಾರೆ.

ಸಣ್ಣ ಕುಂಭ ಮೇಳ ಎಂದು ಕರೆಯಲ್ಪಡುವ ಮಾಘ ಮೇಳವನ್ನು ಉತ್ತರ ಭಾರತದಲ್ಲಿ ಹಿಂದೂ ಧರ್ಮದ  ಸಂಪ್ರದಾಯದಂತೆ ಮಾಘ ಮಾಸದಲ್ಲಿ ನಡೆಸಲಾಗುತ್ತದೆ. ಲಕ್ಷಾಂತರ ಯಾತ್ರಿಕರು ಸೇರುವುದರಿಂದ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮೇಳ ನಡೆಯುವ ಪ್ರದೇಶದಲ್ಲಿ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಸಂಗಮ ನಡೆಯುವ ಪ್ರದೇಶದ ಸುತ್ತಮುತ್ತ 45 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಸ್ನಾನ ಮಾಡುವ ಭಕ್ತಾದಿಗಳಿಗೆ ಯಾವುದಾದರೂ ತೊಂದರೆ ಎದುರಾದಲ್ಲಿ ತುರ್ತು ಸಹಾಯಕ್ಕಾಗಿ ವಾಟರ್ ಪೊಲೀಸ್ ಮತ್ತು 160 ಡೈವರ್ಸ್ ಗಳು ಇರುತ್ತಾರೆ. ವಿಶೇಷ ಕಾರ್ಯಪಡೆ ಮತ್ತು ಭಯೋತ್ಪಾದಕ ನಿಗ್ರಹ ಪಡೆಯನ್ನು ಕೂಡ ನಿಯೋಜಿಸಲಾಗಿದೆ.

No Comments

Leave A Comment