Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ನಿಟ್ಟೆಯ 11 ಮಂದಿ ತಂಡ ಜಪಾನ್‌ಗೆ

ಉಳ್ಳಾಲ: ಪ್ರತಿಷ್ಠಿತ ಜಪಾನ್‌-ಏಷ್ಯಾ ಯುವ ವಿನಿಮಯದ ಅಂಗವಾಗಿ ಜಪಾನ್‌ನ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಯ “ಸಕುರಾ’ ಸಂಶೋಧನ ಮತ್ತು ಚರ್ಚಾ ಕಾರ್ಯಕ್ರಮಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸಸ್‌ನ ಸಿಬಂದಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 11ಮಂದಿಯ ತಂಡ ಜಪಾನ್‌ಗೆ ತೆರಳಲಿದ್ದಾರೆ.

ಜಪಾನ್‌ನಲ್ಲಿ ಜ. 17ರಿಂದ 26ರ ವರೆಗೆ 10 ದಿನಗಳ ಕಾಲ ಈ ತಂಡ ನರ್ಸಿಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು, ಗುಣಮಟ್ಟದ ಸೇವೆ ವಿಚಾರ, ಸಂಶೋಧನ ವಿಚಾರ, ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ನಿಟ್ಟೆ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಫಾತಿಮಾ ಡಿ. ಸಿಲ್ವಾ ಮಾರ್ಗದರ್ಶನದಲ್ಲಿ ಈ ಶೈಕ್ಷಣಿಕ ಯುವ ವಿನಿಮಯ ಜಪಾನ್‌ನ ಮಿಯಾಝಾಕಿ ವಿವಿಯ ಮುಖ್ಯಸ್ಥೆ ಡಾ| ಕಾನೆಕೊ, ಮೆಡಿಸಿನ್‌ ವಿಭಾಗದ ಡೀನ್‌ ಡಾ| ಮಾಸುಗಿ ಮರುಯಾಮ ಮತ್ತು ಶರೀರ ವಿಜ್ಞಾನ ಮತ್ತು ಔಷದ ಶಾಸ್ತ್ರದ ಪ್ರಾಧ್ಯಾಪಕ ಡಾ| ಹರೀಶ್‌ ಮಧ್ಯಸ್ಥರ ಪರಿಶ್ರಮದಿಂದ ಸಾಕಾರಗೊಂಡಿದ್ದು, ಇದರಿಂದ ನರ್ಸಿಂಗ್‌ ಸಂಶೋಧನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಇನ್ನಷ್ಟು ಬಲಿಷ್ಠವಾಗಲಿವೆ. ನಿಟ್ಟೆ ವಿವಿ ಕುಲಪತಿ ಪ್ರೊ| ರಮಾನಂದ ಶೆಟ್ಟಿ, ಸಂಶೋಧನ ವಿಭಾಗದ ನಿರ್ದೇಶಕಿ ಡಾ| ಇಂದ್ರಾಣಿ ಕರುಣಾ ಸಾಗರ್‌, ಅನಿರ್ಬನ್‌ ಚಕ್ರವರ್ತಿ ತಂಡದಲ್ಲಿದ್ದಾರೆ.

No Comments

Leave A Comment