Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಳ್ತ೦ಗಡಿ:ಗಡಾಯಿಕಲ್ಲು ಆ೦ಧ್ರಾಯ ಪಲ್ಕೆ ಹೊಳೆಗೆ ಜಾರಿಬಿದ್ದು ಕಾಪುವಿನ ನಾಲ್ಕು ಮ೦ದಿಯ ದಾರುಣ ಸಾವು/Beltangady: Four of a family from Kaup drown at Nada


ಬೆಳ್ತಂಗಡಿ : ತಾಲೂಕಿನ ನಾಡಾ ಗ್ರಾಮದ ಜಡಾಯಿಕಲ್ಲು ಸಮೀಪದ ತೊರೆಯೊಂದರಲ್ಲಿ ನಾಲ್ವರು ನೀರುಪಾಲದ ದುರಂತ ಬುಧವಾರ ಮಧ್ಯಾಹ್ನ ನಡೆದಿದೆ. ದುರಂತದಲ್ಲಿ ಓರ್ವ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮೃತರ ದುರ್ದೈವಿಗಳು ಉಡುಪಿ ಜಿಲ್ಲೆಯ ಕಾಪುವಿನ ಪಕೀರನ ಕಟ್ಟೆ ನಿವಾಸಿಗಳಾಗಿದ್ದು ,ಕಾಜೂರು ದರ್ಗಾ ವೀಕ್ಷಣೆಗೆಂದು ಕುಟುಂಬ ಸಮೇತ ಬಂದಿದ್ದರು ಎಂದು ತಿಳಿದು ಬಂದಿದೆ.

ಮೃತರು ರಹೀಮ್‌, ಪತ್ನಿ ರುಬೀನಾ(25),ರುಬಿನಾ ತಂಗಿ ಯಾಸ್ಮಿನ್‌(23), ತಮ್ಮ ಸುಬಾನ್‌(15)ಎಂದು ತಿಳಿದು ಬಂದಿದ್ದು, ರಕ್ಷಣೆಗೊಳಗಾದವರು ರುಬೀನಾ ಅವರ ತಾಯಿ ಮೈಮೂನಾ ಎಂದು ತಿಳಿದು ಬಂದಿದೆ.

ಕಾಜೂರು ದರ್ಗಾ ಭೇಟಿಯ ಬಳಿಕ ಇನ್ನೊಂದು ದರ್ಗಾಕ್ಕೆ ತೆರಳಿ ಊಟ ಮುಗಿಸಿ ತೊರೆಯ ಬಳಿ ವಾಹನ ನಿಲ್ಲಿಸಿದ್ದರು. ಈ ವೇಳೆ ನೀರಿಗಿಳಿದ ಸುಬಾನ್‌ ಸೆಳೆತಕ್ಕೆ ಸಿಲುಕಿದ್ದು ಆತನನ್ನು ರಕ್ಷಿಸಲು ಹೋಗಿ ನಾಲ್ವರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ನೀರು ಪಾಲಾಗುತ್ತಿದ್ದ ಮೈಮೂನಾರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.

No Comments

Leave A Comment