Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಬುಧವಾರ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ್ದು, ಎಸ್​ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟಕ್ಕೆ ಮೂರು ವಾರಗಳಲ್ಲಿ ಉತ್ತರ ನೀಡರುವಂತೆ ಸೂಚಿಸಿದೆ.

9 ಸಾವಿರ ಕೋಟಿ ರುಪಾಯಿ ಸಾಲ ಮರುಪಾವತಿ ಮಾಡದೆ ವಂಚಿಸುತ್ತಿರುವ ವಿಜಯ್ ಮಲ್ಯ ಅವರು ಡಿಯಾಜಿಯೊದಿಂದ ಸ್ವೀಕರಿಸಿದ 40 ಮಿಲಿಯನ್ ಡಾಲರ್ ಹಣವನ್ನು ಕೋರ್ಟ್ ನಲ್ಲಿ ಜಮೆ ಮಾಡುವಂತೆ ಸೂಚಿಸಬೇಕು ಎಂದು ಕೋರಿ ಎಸ್ ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಬಗ್ಗೆ ಉತ್ತರಿಸಿಲು ವಿಜಯ್ ಮಲ್ಯಗೆ ಮೂರು ವಾರಗಳ ಕಾಲವಕಾಶ ನೀಡಿದೆ.

ಇದೇ ವೇಳೆ ಹೈಕೋರ್ಟ್ ಆದೇಶ ಉಲ್ಲಂಘಿಸಿ 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನಿಮ್ಮ ಮಗನ ಖಾತೆಗೆ ವರ್ಗಾವಣೆ ಮಾಡಿದ್ದು ಏಕೆ? ಎಂಬುದರ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಮದ್ಯದ ದೊರೆಗೆ ಸೂಚಿಸಿದೆ.

ವಿಜಯ್ ಮಲ್ಯ ಅವರು ಕೋರ್ಟ್ ಗೂ ತಮ್ಮ ಆಸ್ತಿಯ ಸಂಪೂರ್ಣ ವಿವರ ನೀಡುತ್ತಿಲ್ಲ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಹೊರ ಬಂದಿದ್ದಕ್ಕೆ ಪ್ರತಿಯಾಗಿ ವಿಜಯ್ ಮಲ್ಯ ಅವರು ಡಿಯಾಜಿಯೊದಿಂದ ಬೇರೆ ಬೇರೆ ರೀತಿಯ ಪ್ಯಾಕೇಜ್ ಪಡೆದಿದ್ದಾರೆ ಎಂದು ಬ್ಯಾಂಕ್ ಗಳ ಒಕ್ಕೂಟ ತನ್ನ ಅರ್ಜಿಯಲ್ಲಿ ಆರೋಪಿಸಿದೆ.

No Comments

Leave A Comment