Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಹಿರಿಯಡ್ಕ:ಸಂತೋಷ್‌ ನಾಯಕ್‌ ಕೊಲೆ ಆರೋಪಿಗಳ ಬ೦ಧನ

ದಿನಾಂಕ 02/12/2016 ರಂದು ಪರ್ಕಳದ ಸಣ್ಣಕ್ಕಿಬೆಟ್ಟು ವಾಸಿ ಸಂತೋಷ್‌ ನಾಯಕ್‌ ಎಂಬವರು ಕಾಣೆಯಾಗಿದ್ದು, ಸಂತೋಷ್‌ ನಾಯಕ್‌ ಇವರ ಹೆಂಡತಿ ಶ್ರೀಮತಿ ಸುಮಿತ್ರಾ ನಾಯಕ್‌ ಇವರು ತನ್ನ ಪತಿಯನ್ನು ವರ್ವಾಡಿಯ ಪ್ರವೀಣ್‌ ಕುಲಾಲ ಎಂಬವನು ಇತರರೊಂದಿಗೆ ಸೇರಿ ಕೊಲೆ ಮಾಡಿ ಶವವನ್ನು ನಾಶ ಮಾಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ದಿನಾಂಕ 04/01/2017 ರಂದು ದೂರು ನೀಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ಈ ಕೊಲೆ ಪ್ರಕರಣದ ಆಪಾದಿತರಾದ ಯರ್ಲಾಪಾಡಿಯ ಪ್ರಸಾದ್‌ (23)ಮಂಗಳೂರು ಕೃಷ್ಣಾಪುರ ವಾಸಿ ದಯಾನಂದ (37)ಉಡುಪಿಯ ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನು(40)ಹಿರಿಯಡ್ಕದ ಜಯಂತ್‌ ಪೈ (55)ಪೆರ್ಣಂಕೀಲದ ವಾಸಿ ಕೃಷ್ಣ(33)ಮರ್ಣೆ ವಾಸಿ ಮಹೇಶ್‌ ಆಚಾರಿ(23)ಪೆರ್ಣಂಕೀಲದ ವಾಸಿ ರಮೇಶ್‌(35)ಪ್ರಕಾಶ್ ಮೂಲ್ಯ ಕೊಡಿಬೆಟ್ಟು (29) ಇವರನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿತರಾಗಿರುವ ನಿತ್ಯಾನಂತದ ನಾಯಕ್‌ , ಜಯಂತ್‌ ಪೈ ಮತ್ತು ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನು ಇವರಿಗೆ ಮೃತ ಸಂತೋಷ್‌ ನಾಯಕ್‌ ಈತನು ಕಳೆದ 5-6 ವರ್ಷದಿಂದ ಹಣ ಕೊಡಲು ಇದ್ದು ಹಣವನ್ನು ಕೊಡದೆ ಸತಾಯಿಸುತ್ತಿದ್ದು ಹಣವನ್ನು ವಸೂಲು ಮಾಡುವಂತೆ ಈ ಮೂರು ಜನ ಆರೋಪಿತರು ಪ್ರವೀಣ್‌ ಕುಲಾಲನಿಗೆ ತಿಳಿಸಿದ್ದು, ದಿನಾಂಕ 02/12/2016 ರಂದು ಬೆಳಿಗ್ಗೆ ಪ್ರವೀಣ್‌ ಕುಲಾಲನು ಸಂತೋಷ ನಾಯಕನನ್ನು ಕುದಿಯ ಆತನ ಹೆಂಡತಿ ಮನೆಯಿಂದ ಅಪಹರಣ ಮಾಡಿ ವರ್ವಾಡಿಗೆ ಕರೆದುಕೊಂಡು ಅಲ್ಲಿ ತನ್ನ ಸಹಚರರೊಂದಿಗೆ ಸೇರಿ ಆತನಿಗೆ ಹಿಂಸೆ ನೀಡಿ ಬಾಯಿ ಬಿಡಿಸಲು ಪ್ರಯತ್ನಿಸಿರುತ್ತಾನೆ. ಅಲ್ಲಿಗೆ ನಿತ್ಯಾನಂತದ ನಾಯಕ್‌ , ಜಯಂತ್‌ ಪೈ ಮತ್ತು ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನು ರವರನ್ನು ಪ್ರವೀಣ್‌ ಕುಲಾಲನು ಕರೆಯಿಸಿಕೊಂಡು ಅವರ ಮುಂದೆ ಹೊಡೆದು ಹಿಂಸೆ ಮಾಡಿ ಬಾಯಿ ಬಿಡಿಸಲು ಪ್ರಯತ್ನಿಸಿರುತ್ತಾರೆ. ನಂತರ ಹಿಂಸೆಗೆ ಸಂತೋಷ್‌ ನಾಯಕನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅದೇ ದಿನ ರಾತ್ರಿ ಸಣ್ಣಕ್ಕಿಬೆಟ್ಟಿನಲ್ಲಿರುವ ಮೃತ ಸಂತೋಷ್‌ ನಾಯಕ ಮನೆಗೆ ಪ್ರವೀಣ್‌ ಕುಲಾಲ್‌ ತನ್ನ ಸಹಚರರೊಂದಿಗೆ ಬಂದು ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿ ಹಣ ಇರುವ ಬಗ್ಗೆ ಮನೆಯ ಕಪಾಟುಗಳನ್ನು ಒಡೆದು ಹಣ ಇರುವ ಬಗ್ಗೆ ತಪಾಸಣೆ ಮಾಡಿರುತ್ತಾರೆ. ನಂತರ ಮನೆಯ ಮುಂದಿರುವ ದೇವರ ಗುಡಿಯ ಪೀಠವನ್ನು ಅಗೆದು ಹಣದ ಬಗ್ಗೆ ತಪಾಸಣೆ ನಡೆಸಿರುತ್ತಾರೆ. ಆದರೆ ಹಣ ಸಿಕ್ಕಿರುವುದಿಲ್ಲ. ಮನೆಯಲ್ಲಿದ್ದ ಸಂತೋಷ್‌ ನಾಯಕ್‌ ಈತನ ಹೆಂಡತಿ ಸುಮಿತ್ರಾ , ತಾಯಿ ರತ್ನಾವತಿ ನಾಯಕ್‌ , ತಮ್ಮ ವಿದ್ಯಾಧರ, ತಮ್ಮನ ಹೆಂಡತಿ ಶೋಭ ಮತ್ತು ಮೃತರ ಮಕ್ಕಳನ್ನು ಹೆದರಿಸಿ ಬಲತ್ಕಾರವಾಗಿ ಕಾರಿನಲ್ಲಿ ವಾರ್ವಡಿಗೆ ಕರೆದುಕೊಂಡು ಹೋಗಿ ಅವರಿಂದಲು ಹಣವಿರುವ ಬಗ್ಗೆ ಬಾಯಿ ಬಿಡಿಸಲು ಪ್ರಯತ್ನ ಮಾಡಿರುತ್ತಾನೆ. ಅವರು ಬಾಯಿ ಬಿಡದೇ ಇರುವುದಿಂದ ಅವರಲ್ಲಿರುವ ಕರಿಮಣಿ ಸರ, ಉಂಗುರ, ಮಕ್ಕಳ ಕಾಲು ಚೈನ್‌ ಕಿತ್ತುಕೊಂಡು ವಾಪಾಸು ಎಲ್ಲರನ್ನು ಸಣ್ಣಕ್ಕಿ ಬೆಟ್ಟಿಗೆ ಬಿಟ್ಟು ಹೋಗಿರುತ್ತಾನೆ. ಅದೇ ದಿನ ರಾತ್ರಿ ಮೃತ ದೇಹ ಇರುವ ವರ್ವಾಡಿಗೆ ಬಂದು ಮೃತ ದೇಹದ ಕಾಲುಗಳನ್ನು ಕತ್ತರಿಸಿ ಗೋಣೀ ಚೀಲಕ್ಕೆ ಹಾಕಿ ಮೃತ ದೇಹವನ್ನು ಪರ್ಣಂಕೀಲ ಕಾಡಿನಲ್ಲಿರುವ ಒಂದು ಪಾಳು ಬಾವಿಯಲ್ಲಿ ಪ್ರವೀಣ ಕುಲಾಲನು , ಇತರ ಸಹಚರೊಂದಿಗೆ ಹೂತು ಹಾಕಿರುತ್ತಾನೆ ಈ ಬಗ್ಗೆ ಆರೋಪಿತರ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಕೃತ್ಯಕ್ಕೆ ಸಂಬಂದಪಟ್ಟ ಹಾಗೇ ಉಪಯೋಗಿಸಿದ ಕಾರು , ಹಗ್ಗಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಈ ಕೊಲೆ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಟಿ.ಬಾಲಕೃಷ್ಣ ಐಪಿಎಸ್ ಮತ್ತು ವಿಷ್ಣುವರ್ಧನ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತದ ಸಿಪಿಐ ಶ್ರೀಕಾಂತ ಕೆ, ಉಡುಪಿ ಡಿಸಿಐಬಿ ಪೊಲೀಸ್‌ ನಿರೀಕ್ಷಕರಾದ ಸಂಪತ್‌ ಕುಮಾರ್‌ ಹಾಗೂ ತಂಡ, ಹಿರಿಯಡ್ಕ ಠಾಣಾ ಪಿ.ಎಸ್‌.ಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಯವರು ಹಾಗೂ ಸಿ.ಡಿ.ಆರ್‌ ವಿಭಾಗದವರು ಭೇದಿಸಿರುತ್ತಾರೆ.

No Comments

Leave A Comment