Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪುರುಷರೇ ಎಚ್ಚರ, ಕೆಂಪು ಮಾಂಸ ಹೆಚ್ಚು ಸೇವಿಸಿದರೆ ಎದುರಾಗಲಿದೆ ಕರುಳಿನ ಕಾಯಿಲೆ!

ವಾಷಿಂಗ್ ಟನ್: ವಾರದಲ್ಲಿ 6 ಬಾರಿ ಕೆಂಪು ಮಾಂಸ (ರೆಡ್ ಮೀಟ್) ಸೇವಿಸಿದರೆ ಕರುಳಿನ ಕಾಯಿಲೆ ಎದುರಾಗುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನ ವರದಿ ಎಚ್ಚರಿಕೆ ನೀಡಿದೆ.

ಜರ್ನಲ್ ಗಟ್ ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದ್ದು, ವಾರದಲ್ಲಿ 6 ಬಾರಿ ಕೆಂಪು ಮಾಂಸ ಸೇವನೆ ಮಾಡುವುದರಿಂದ ಕರುಳಿನ ಸಮಸ್ಯೆ ಎದುರಾಗುವ ಸಾಧ್ಯತೆ ಶೇ.58 ರಷ್ಟು ಹೆಚ್ಚಿರುತ್ತದೆ, ಸಂಸ್ಕರಿಸದ ಕೆಂಪು ಮಾಂಸವನ್ನು ಸೇವಿಸಿದರೆ ಈ ರೀತಿಯ ಅಪಾಯ ಎದುರಾಗುವ ಸಾಧ್ಯತೆ ಇನ್ನೂ ಹೆಚ್ಚಿರುತ್ತದೆಯಂತೆ.

ಪ್ರತಿ ಬಾರಿ ಸೇವಿಸಿದಾಗಲೂ ಕರುಳಿನ ಉರಿಯೂತ ಸೇರಿದಂತೆ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಎದುರಾಗುವ ಸಾಧ್ಯತೆ ಶೇ.18 ರಷ್ಟಿರುತ್ತದೆ, ಈ ಪ್ರಮಾಣ ಸಂಸ್ಕರಿಸದ ಕೆಂಪು ಮಾಂಸವನ್ನು ಸೇವಿಸಿದರೆ ಶೇ.20 ರಷ್ಟಿರಲಿದೆ ಎಂದು ಗಟ್ ಜರ್ನಲ್ ತಿಳಿಸಿದೆ.

40-75 ವರ್ಷದ ವರೆಗಿನ 46,500 ಪುರುಷರಲ್ಲಿ ಈ ರೀತಿಯ ಸಮಸ್ಯೆ ಎದುರಾಗಿರುವುದನ್ನು ಸಂಶೋಧನಾ ತಜ್ಞರು ಗಮನಿಸಿದ್ದಾರೆ. 1986 ಹಾಗೂ 2012 ರ ನಡುವಿನ ಅವಧಿಯಲ್ಲಿ ಸಮೀಕ್ಷೆಗೊಳಪಟ್ಟವರನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಗಾಗಿದ್ದು ತಿಂಗಳಿಗೆ ಕನಿಷ್ಠ ಒಮ್ಮೆ ಅಥವಾ ಎಂದಿಗೂ ಸೇವನೆ ಮಾಡಿಲ್ಲ, ಒಂದು ವಾರದಲ್ಲಿ 6 ಬಾರಿ ಹೀಗೆ ನಾಲ್ಕು ಆಯ್ಕೆಗಳನ್ನು ನೀಡಿ ಹಿಂದಿನ ವರ್ಷದವರೆಗೂ ಅವರು ಸರಾಸರಿ ಸೇವಿಸಿರುವ ಕೆಂಪು ಮಾಂಸದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರಿಗೆ ಕೆಂಪು ಮಾಂಸ ಸೇವಿಸುವುದರ ಕುರಿತು 26 ವರ್ಷಗಳ ಸುದೀರ್ಘ ಅವಧಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಕೆಂಪು ಮಾಂಸ ಸೇವಿಸುತ್ತಿದ್ದ 764 ಜನರು ಕರುಳಿನ ಸಮಸ್ಯೆ ಎದುರಿಸಿದ್ದಾರೆ ಎಂದು ಗಟ್ ಜರ್ನಲ್ ವರದಿ ಪ್ರಕಟಿಸಿದೆ. ಆದ್ದರಿಂದ ವಾರದಲ್ಲಿ 6 ಬಾರಿ ಕೆಂಪು ಮಾಂಸ ಸೇವಿಸುವುದರಿಂದ ಕರುಳಿನ ಕಾಯಿಲೆ ಎದುರಾಗುವ ಅಪಾಯ ಹೆಚ್ಚು ಎಂಬ ಎಚ್ಚರಿಕೆ ನೀಡಿದೆ.

No Comments

Leave A Comment