Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಆಫ್ಘಾನಿಸ್ತಾನ ಸಂಸತ್ ಬಳಿ ಅವಳಿ ಬಾಂಬ್ ಸ್ಫೋಟ: 50 ಸಾವು, ಹಲವರಿಗೆ ಗಾಯ


ಕಾಬೂಲ್:
ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಸಂಸತ್ ಭವನದ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಅವಳಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ 50 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯವಾಗಿರವ ಘಟನೆ ನಡೆದಿದೆ.

ಆಫ್ಘಾನಿಸ್ತಾನದ ಯುಎಇ ರಾಯಭಾರಿ ದಕ್ಷಿಣ ಕಂದಹಾರ್ ನಲ್ಲಿರುವ ಆಫ್ಘಾನಿಸ್ತಾನ ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಕಾಂಪೌಂಡ್ ಒಳಗಿದ್ದ ಸೋಫಾದಲ್ಲಿ ಬಾಂಬ್ ವೊಂದನ್ನು ಇಟ್ಟು ಸ್ಫೋಟ ನಡೆಸಲಾಗಿದೆ.

ಘಟನೆಯಲ್ಲಿ ಯುಎಇ ರಾಯಭಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ.ಇದಾದ ಕೆಲವೇ ಗಂಟೆಗಳಲ್ಲಿ ಸಂಸತ್ತಿನ ಬಳಿ ಕೂಡ ಬಾಂಬ್ ಸ್ಫೋಟ ನಡೆಸಲಾಗಿದೆ. ಈ ವೇಳೆ 30 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 80ಕ್ಕೂ ಹೆಚ್ಚಿ ಮಂದಿ ಗಾಯಗೊಂಡಿದ್ದಾರೆ.

ಇದಲ್ಲದೆ, ಜನನಿಬಿಡ ಪ್ರದೇಶಗಳಲ್ಲಿಯೂ ತಾಲಿಬಾನ್ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು, ಈ ವೇಳೆ ಸಾವನ್ನಪ್ಪಿರುವವವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಭಾರತ ಹಣಕಾಸು ನೆರವು ನೀಡಿರುವ ಸಂಸತ್ ಬಳಿಯೇ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರಣಿ ಸ್ಫೋಟದಲ್ಲಿ ಭಾರೀ ಸಾವುನೋವು ಸಂಭವಿಸಿರುವ ಸಾಧ್ಯತೆಗಳಿದ್ದು, ಸಂಸತ್ ಭವನದ ಕಚೇರಿಗಳು ಮತ್ತು ಸಿಬ್ಬಂದಿಗಳು ಈ ಸ್ಫೋಟಗಳ ಗುರಿಯಾಗಿದ್ದರು ಎಂದು ವರದಿಗಳು ಹೇಳಿವೆ.

No Comments

Leave A Comment