Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಮತ್ತೆ ಖೋಟಾ ನೋಟು ಹಾವಳಿ; ದೆಹಲಿಯಲ್ಲಿ 6.1 ಕೋಟಿ ರು.ಮೌಲ್ಯದ ನಕಲಿ ನೋಟು ವಶಕ್ಕೆ!

ನವದೆಹಲಿ: ಕಪ್ಪುಹಣ ನಿಯಂತ್ರಣ ಹಾಗೂ ಖೋಟಾ ನೋಟು ಸಮಸ್ಯೆ ನಿಯಂತ್ರಿಸಲು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ಹೊಸ ನೋಟುಗಳನ್ನು ಚಲಾವಣೆಗೆ ತಂದಿರುವಂತೆಯೇ ಇತ್ತ ಖೋಟಾ ನೋಟು ದಂಧೆ  ಕೋರರು ಹೊಸ ನೋಟುಗಳನ್ನೂ ಕೂಡ ನಕಲಿಯಾಗಿ ಮುದ್ರಿಸಿ ಚಲಾವಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ದೆಹಲಿಯ ಬಿಂಡಾಪುರದಲ್ಲಿ ನಕಲಿ ನೋಟು ನೋಟು ಮುದ್ರಿಸುತ್ತಿದ್ದ  ಇಬ್ಬರು ಗ್ರಾಫಿಕ್ ಡಿಸೈನರ್ ಗಳನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಸಮಾರು 6.5 ಲಕ್ಷ ಮೌಲ್ಯದ ನೋಟುಗಳನ್ನು  ಅಧಿಕಾರಿಗಳು ವಶಪಡಿಸಿಕೊಂಡಿದ್ದು. ಈ ಪೈಕಿ 6.1 ಲಕ್ಷ ನೋಟುಗಳು ನಕಲಿ ನೋಟುಗಳು ಎಂದು ತಿಳಿದುಬಂದಿದೆ. ಇದೇ ವೇಳೆ ಬಂಧಿತರು ಹೇಳಿಕೊಂಡಿರುವಂತೆ ಸುಮಾರು 20 ಸಾವಿರ ರು. ಮೌಲ್ಯದ ನಕಲಿ ನೋಟುಗಳನ್ನು  ಚಲಾವಣೆ ಮಾಡಿರುವುದಾಗಿ ಹೇಳಿದ್ದಾರೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ಬಂಧಿತರಿಬ್ಬರೂ ಸ್ನಾತಕೋತ್ತರ ಪದವೀಧರರಾಗಿದ್ದು, ಫೋಟೋಗಳನ್ನು ಎಡಿಟ್ ಮಾಡುವ ವಿವಿಧ ಸಾಫ್ಟ್ ವೇರ್ ಗಳನ್ನು ಬಳಕೆ ಮಾಡಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಈ ಬಗ್ಗೆ  ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ದಾಳಿ ಮಾಡಿ ಇಬ್ಬರನ್ನೂ ಬಂಧಿಲಾಗಿದೆ. ಅಂತೆಯೇ ಮುದ್ರಣಕ್ಕೆ ಬಳಕೆ ಮಾಡಲಾಗುತ್ತಿದ್ದ ಕಂಪ್ಯೂಟರ್, ಮುದ್ರಣದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಡಿಸಿಪಿ  ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

No Comments

Leave A Comment