Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಗಣರಾಜ್ಯೋತ್ಸವ ಪರೇಡ್ ನಲ್ಲಿ ಅರಬ್ ಸೇನೆ ಭಾಗಿ ಸಾಧ್ಯತೆ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಅರಬ್ ನ (ಯುಎಇ) ರಕ್ಷಣಾ ಪಡೆಗಳು ಗಣರಾಜ್ಯೋತ್ಸವ ದಿನದಂದು ರಾಜ್ ಪಥ್ ನಲ್ಲಿ  ನಡೆಯಲಿರುವ ಪರೇಡ್ ನಲ್ಲಿ ಭಾಗವಹಿಸಲಿವೆ.

2016 ರಲ್ಲಿ ಫ್ರೆಂಚ್ ಪಡೆ ಇದೇ ಮಾದರಿಯಲ್ಲಿ ಪರೇಡ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈಗ ಅರಬ್ ನ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಝಯೀದ್-ಅಲ್- ನಹ್ಯಾನ್ 2017 ರ ಗಣರಾಜ್ಯೋತ್ಸವಕ್ಕೆ ವಿಶೇಷ ಅಥಿತಿಯಾಗಿರಲಿದ್ದು, ಇದೇ ಮೊದಲ ಬಾರಿಗೆ ಯುಎಇ ಪಡೆ ಗಣಾರಾಜ್ಯೋತ್ಸವದಲ್ಲಿ ಭಾಗವಹಿಸಲಿದೆ.

ಜ.20 ರಂದು ಶೇಖ್ ಮೊಹಮ್ಮದ್ ವಿದೇಶಾಂಗ ಇಲಾಖೆ ರಾಜ್ಯ ಸಚಿವರಾದ ಎಂಜೆ ಅಕ್ಬರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶೇಖ್-ಮೊಹಮ್ಮದ್ ಅವರ ಭಾರತ ಭೇಟಿಯಿಂದ ಅರಬ್-ಭಾರತ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ರಸ್ತೆ ಮತ್ತು ಹೆದ್ದಾರಿ ಕ್ಷೇತ್ರಗಳಲ್ಲಿ ಹೂಡಿಕೆಯ ಬಗ್ಗೆ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

No Comments

Leave A Comment