Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಛೀ ಕಳ್ಳ…ಅಬ್ಬಾ ಮಂಗಳೂರಿನಲ್ಲಿ ಪೋಲಿ, ಕಾಮುಕ ಜ್ಯೋತಿಷಿ ಅರೆಸ್ಟ್!

ಮಂಗಳೂರು:ಲೈಂಗಿಕ ದೋಷ, ಸಂತಾನ ಭಾಗ್ಯ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕೊಡುವುದಾಗಿ ಹೇಳಿ ಯುವತಿಯರನ್ನು, ಮಹಿಳೆಯರನ್ನು ವಂಚಿಸುತ್ತಿದ್ದ ಮಂಗಳೂರಿನ ಕಪಟ ಜ್ಯೋತಿಷಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಂತಾನ ಭಾಗ್ಯದ ದೋಷ ಹೇಳಿಕೊಂಡು ಬರುತ್ತಿದ್ದ ಮಹಿಳೆಯರಿಗೆ, ಬ್ರಾಹ್ಮಣನ ಜೊತೆ ಮಲಗು, ಇದರಿಂದ ಸಂತಾನ ಭಾಗ್ಯ ದೊರೆಯುತ್ತದೆ ಎಂಬಂತಹ ಮನೆಹಾಳು ಸಲಹೆ ನೀಡುತ್ತಿದ್ದ ಕಾಮುಕ ಜ್ಯೋತಿಷಿ ರಾಮಕೃಷ್ಣ ಶರ್ಮಾ ಕಂಬಿ ಎಣಿಸುತ್ತಿದ್ದಾನೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮಕ್ಕಳಾಗಲಿ ಅಂತ ಕೇಳೋಕೆ ಬಂದವರಿಗೆಲ್ಲಾ ಸೆಕ್ಸ್ ಕಥೆ ಹೇಳಿ ಭವಿಷ್ಯ ಹೇಳುತ್ತಿದ್ದ ಕಪಟಿ ಶರ್ಮಾನ ಬಂಡವಾಳ ಖಾಸವಿ ಟಿವಿ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲಾಗಿದೆ.

ಕಾಮುಕ ಜ್ಯೋತಿಷಿಯ ಬಂಡವಾಳ ಬಯಲಾಗುತ್ತಿದ್ದಂತೆಯೇ ಮಂಗಳೂರಿನಲ್ಲಿರುವ ಕಪಟಿ ಜ್ಯೋತಿಷ್ಯಾಲಯದ ಮೇಲೆ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಹೇಗೆ ನಡೆಯಿತು ಗೊತ್ತಾ ರಹಸ್ಯ ಕಾರ್ಯಾಚರಣೆ?
ರಹಸ್ಯ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬರು ತಂದೆ ಮಗಳಂತೆ ನಟಿಸಿ ಕಪಟಿ ಜ್ಯೋತಿಷಿ ಬಳಿಗೆ ಹೋಗಿದ್ದರು. ಮದುವೆಯಾಗಿ 10 ವರ್ಷವಾಗಿದ್ದರೂ ಮಗುವಾಗಿಲ್ಲ.. ಸಂತಾನ ಭಾಗ್ಯಕ್ಕಾಗಿ ವಿನಂತಿಸಲಾಯಿತು. ಆಗ ಆತನ ಉದುರಿಸಿದ ಅಣಿಮುತ್ತು…ಸಲಹೆ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗುವ ಮೂಲಕ ಕಾಮಿಯ ಬಂಡವಾಳ ಬಯಲಾಗಿತ್ತು.

No Comments

Leave A Comment