Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಸೌದಿ ಅರೇಬಿಯಾದಲ್ಲಿ ಇಬ್ಬರು ಶಂಕಿತ ಉಗ್ರರ ಹತ್ಯೆ

                                                           

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.

ಉಗ್ರರಿಬ್ಬರು ಸ್ಫೋಟಕಗಳನ್ನು ತಯಾರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಪೊಲೀಸರನ್ನು ಕಂಡ ಉಗ್ರರು ಮೆಷಿನ್ ಗನ್ ನಿಂದ ಪ್ರತಿ ದಾಳಿಗೆ ಮುಂದಾದರು ಅಷ್ಟರಲ್ಲಾಗಲೇ ಪೊಲೀಸರ ಗುಂಡು ಇಬ್ಬರು ಉಗ್ರರ ದೇಹ ಹೊಕ್ಕಿದೆ.

ಮೃತ ಶಂಕಿತ ಉಗ್ರರ ಪೈಕಿ ಓರ್ವನನ್ನು ತಹೀ ಅಲ್ ಸೈಹಾರಿ. ಈತ ಶಸ್ತ್ರಾಸ್ತ್ರಗಳನ್ನು ತಯಾರಿ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರಿಗೆ ಬೇಕಾಗಿದ್ದ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

2015ರ ವಿಶೇಷ ಪಡೆ ಕೇಂದ್ರ ಕಚೇರಿ ಬಳಿ ಬಾಂಬ್ ದಾಳಿ ಮತ್ತು ಕಳೆದ ವರ್ಷ ಮದಿನಾದ ಪ್ರವಾದಿ ಮಸೀದಿ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಆರೋಪಿಯಾಗಿದ್ದ.

No Comments

Leave A Comment