Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಎಲ್ಲೆಡೆಯಲ್ಲಿ ಸ೦ಭ್ರಮದ ಭಕ್ತಿ–ಭಾವದ ವೈಕುಂಠ ಏಕಾದಶಿ

ಬೆಂಗಳೂರು: ವೈಕುಂಠ ಏಕಾದಶಿಯನ್ನು ನಗರದಲ್ಲಿ ಭಾನುವಾರ ಭಕ್ತಿ– ಭಾವದಿಂದ ಆಚರಿಸಲಾಗುತ್ತಿದೆ.

ವೈಕುಂಠ ಏಕಾದಶಿಯ ಪ್ರಯುಕ್ತ ನಗರದಲ್ಲಿರುವ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಭಾರಿ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ವೈಯ್ಯಾಲಿಕಾವಲ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣ ದೇವಸ್ಥಾನ, ದೇವಗಿರಿಯ ಶ್ರೀನಿವಾಸ ದೇವಸ್ಥಾನ, ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯ, ಜೆ.ಪಿ.ನಗರದ ಲಕ್ಷ್ಮಿವೆಂಕಟರಮಣ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ವಿಶೇಷ ಪೂಜೆಗಳು ಮತ್ತು ಅಭಿಷೇಕ ನಡೆದವು.

ಎಲ್ಲ ದೇವಸ್ಥಾನಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದೇಗುಲಗಳಲ್ಲಿ ವೆಂಕಟರಮಣನ ಸ್ಮರಣೆಯು ಮೊಳಗಿತು. ವೆಂಕಟರಮಣನ ಕುರಿತು  ಕೀರ್ತನೆ, ದೇವರನಾಮ ಗಾಯನ ಕಾರ್ಯಕ್ರಮಗಳು ನಡೆಯುತ್ತಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬೆಳ್ಳಂಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕೆಲವರು ದಿನವಿಡೀ ಉಪವಾಸವಿದ್ದು ವ್ರತಾಚರಣೆ ನಡೆಸುತ್ತಿದ್ದಾರೆ.

ವಿವಿಧ ಮಂತ್ರ ಘೋಷಗಳ ನಡುವೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು. ಬಹುತೇಕ ದೇವಸ್ಥಾನದಲ್ಲಿ ಲಾಡು, ಇತರೆ ಪ್ರಸಾದಗಳನ್ನು ವಿತರಿಸಲಾಗುತ್ತಿದೆ.

Comments
  • JPK .. New Look of KARAVALIKIRANA is too good.. All the best…

    January 9, 2017

Leave A Comment