Log In
BREAKING NEWS >
ನಾಡಿನ ಸಮಸ್ತ ಜನತೆಗೆ,ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗದ ಯುಗಾದಿ ಹಬ್ಬದ ಶುಭಾಶಯಗಳು.......ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಕ್ಯಾಥರಿನಾ ಸಿನಿಯಕೋವಾ ಮೊದಲ ಪ್ರಶಸ್ತಿ ಸಂಭ್ರಮ

ಶೆಂಝೆನ್‌ (ಚೀನ): ವಿಶ್ವದ 7 ಡಬುÉÂಟಿಎ ಟೂರ್ನಿಗಳಲ್ಲಿ ಒಂದಾಗಿರುವ ಚೀನದ ಶೆಂಝೆನ್‌ ಓಪನ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಜೆಕ್‌ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ ಚಾಂಪಿಯನ್‌ ಆಗಿದ್ದಾರೆ. ವಿಶ್ವದ 52ನೇ ರ್‍ಯಾಂಕಿಂಗ್‌ ಆಟಗಾರ್ತಿ ಸಿನಿಯಕೋವಾ ಜಯಿಸಿದ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಇದೆಂಬುದು ವಿಶೇಷ.

ಶನಿವಾರದ ಫೈನಲ್‌ನಲ್ಲಿ ಸಿನಿಯಕೋವಾ 6-3, 6-4 ಅಂತರದಿಂದ ಅಮೆರಿಕದ ಅಲಿಸನ್‌ ರಿಸ್ಕೆ ಅವರಿಗೆ ಸೋಲುಣಿಸಿದರು. ಚಾಂಪಿಯನ್‌ ಹಾದಿಯಲ್ಲಿ ಅವರು ಟಾಪ್‌-10 ಯಾದಿಯ ಆಟಗಾರ್ತಿಯರಾದ ಸಿಮೋನಾ ಹಾಲೆಪ್‌, ಜೊಹಾನ್ನಾ ಕೊಂಟಾ ಆಟಕ್ಕೆ ತೆರೆ ಎಳೆದುದನ್ನು ಮರೆಯುವಂತಿಲ್ಲ.

20ರ ಹರೆಯದ ಸಿನಿಯಕೋವಾ ಕಳೆದ ವರ್ಷ ಬಸ್ತಾದ್‌ ಹಾಗೂ ಟೋಕಿಯೋ ಡಬ್ಲ್ಯುಟಿಎ ಕೂಟದ ಫೈನಲ್‌ ಪ್ರವೇಶಿಸಿದ್ದರೂ ಪ್ರಶಸ್ತಿ ಎತ್ತುವಲ್ಲಿ ವಿಫ‌ಲರಾಗಿದ್ದರು. ರಿಸ್ಕೆ ವಿರುದ್ಧದ ಶನಿವಾರದ ಹೋರಾಟ 78 ನಿಮಿಷಗಳ ಕಾಲ ಸಾಗಿತು.

“ನನ್ನ ಪಾಲಿಗೆ ಇದು ಶ್ರೇಷ್ಠ ವಾರವಾಗಿತ್ತು. ಇದೊಂದು ಕಠಿನ ಪಂದ್ಯವಾಗಿತ್ತು. ಈ ಸಲವಾದರೂ ಚಾಂಪಿಯನ್‌ ಆದೆನಲ್ಲ ಎಂದು ಖುಷಿಯಾಗುತ್ತಿದೆ. ನನ್ನ ಅತ್ಯುತ್ತಮ ಆಟವನ್ನೇನೂ ಆಡಲಿಲ್ಲ. ಆದರೆ ಒಟ್ಟಾರೆ ಸಾಧನೆ ಸಂತಸ ತಂದಿದೆ…’ ಎಂದು ಸಿನಿಯಕೋವಾ ಪ್ರತಿಕ್ರಿಯಿಸಿದರು.

 

No Comments

Leave A Comment