Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

‘ಬ್ರೇನ್ ಡ್ರೇನ್’ ಅನ್ನು ‘ಬ್ರೇನ್ ಗೇನ್’ ಆಗಿ ಪರಿವರ್ತಿಸುವುದು ಸರ್ಕಾರದ ಉದ್ದೇಶ: ಪ್ರಧಾನಿ ಮೋದಿ

ಬೆಂಗಳೂರು: ‘ಬ್ರೇನ್ ಡ್ರೇನ್’ ಅನ್ನು ‘ಬ್ರೇನ್ ಗೇನ್’ ಆಗಿ ಪರಿವರ್ತಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

14ನೇ ಪ್ರವಾಸಿ ಭಾರತೀಯ ದಿವಸಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಪ್ರವಾಸಿ ಭಾರತೀಯ ದಿವಸ ಮಹಾತ್ಮ ಗಾಂಧಿಯವರಿಗೆ ಅರ್ಪಸುತ್ತಿದ್ದೇನೆ.  30 ಮಿಲಿಯನ್ ರಷ್ಟು ಭಾರತೀಯರು ವಿದೇಶಲ್ಲಿ ನೆಲೆಯೂರಿದ್ದಾರೆ. ದೇಶದ ಅಭಿವೃದ್ಧಿ ಪಥಕ್ಕೆ ಪ್ರವಾಸಿಗರ ಕೊಡುಗೆ ಅಪಾರವಾದದ್ದು. ಭಾರತೀಯರು ಎಲ್ಲಿಯೇ ಅದ್ದರೂ, ಅನಿವಾಸಿಗಳು ಭಾರತದ ಸಂಸ್ಕೃತಿ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆಂದು ಹೇಳಿದ್ದಾರೆ.ವಿಶ್ವದ ಎಲ್ಲಾ ದೇಶಗಳಲ್ಲಿಯೂ ಭಾರತೀಯ ಹೆಜ್ಜೆ ಗುರುತುಗಳಿವೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಪತ್ರಿಕೋದ್ಯಮ ಬ್ಯಾಂಕಿಂಗ್, ಆರ್ಥಿಕತೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಸಾಧನೆ ದೊಡ್ಡದಾಗಿದ್ದು, ಬ್ರೇನ್ ಡ್ರೇನ್ ಅನ್ನು ಬ್ರೇನ್ ಗೇನ್ ಆಗಿ ಪರಿವರ್ತಿಸುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಉದ್ಯೋಗ ಹುಡುಕಿಕೊಂಡು ವಿದೇಶಕ್ಕೆ ವಲಸೆ ಹೋಗುವವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಪಾಸ್ ಪೋರ್ಟ ನ ಬಣ್ಣವನ್ನು ನಾವು ನೋಡುವುದಿಲ್ಲ. ಅದರೆ, ಅದರೊಂದಿಗೆ ಕೂಡಿರುವ ರಕ್ತದ ಬಂಧವನ್ನು ನಾವು ನೋಡುತ್ತೇವೆ. ಸುಷ್ಮಾ ಸ್ವರಾಜ್ ಅವರು ವಿದೇಶದಲ್ಲಿರುವ ಭಾರತೀಯರ ರಕ್ಷಣೆ ಕುರಿತಂತೆ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ವರೆಗೂ 80 ಸಾವಿರ ಭಾರತೀಯನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ವಿದೇಶಕ್ಕೆ ಹೋಗುವ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡಲು ಶೀಘ್ರದಲ್ಲಿಯೇ ಪ್ರವಾಸಿ ಕೌಶಲ್ ವಿಕಾ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ಮೊದಲ ಬಾರಿಗೆ ವಿದೇಶಕ್ಕೆ ಹೋಗುವ ಭಾರತೀಯರಿಗೆ ಆ ದೇಶದಲ್ಲಿನ ಸಂಸ್ಕೃತಿಯ ಅರಿವು ಹಾಗೂ ಅಲ್ಲಿ ಹೇಗೆ ಕೆಲಸ ಮಾಡಬೇಕೆಂಬ ಮಾಹಿತಿಯನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.ಅನಿವಾಸಿ ಭಾರತೀಯ ಪಿಐಒ ಕಾರ್ಡ್ ಗಳನ್ನು ಒಸಿಐ ಕಾರ್ಡ್ ಗಳನ್ನಾಗಿ ಬದಲಿಸಿಕೊಳ್ಳಲು ವಿಧಿಸಲಾಗಿದ್ದ ಕೊನೆಯ ದಿನಾಂಕವನ್ನು ಈ ವರ್ಷದ ಜೂನ್ ತಿಂಗಳವರೆಗೂ ವಿಸ್ತರಿಸಲಾಗಿದೆ.ಪ್ರವಾಸಿ ಭಾರತೀಯ ಯುವಜನರು ಭಾರತವನ್ನು ಎಂದಿಗೂ ಮರೆಯಬಾರದು. ಪ್ರವಾಸಿ ಭಾರತೀಯರು ಮತ್ತೆ ಮತ್ತೆ ಭಾರತಕ್ಕೆ ಬರಬೇಕು ಎಂದಿದ್ದಾರೆ.

ಇದೇ ವೇಳೆ ಕಪ್ಪುಹಣ ಕುರಿತಂತೆ ಮಾತನಾಡಿರುವ ಅವರು, ಕಾಳಧನಿಕರ ವಿರುದ್ಧ ನಮ್ಮ ಸರ್ಕಾರ ಯುದ್ಧ ಸಾರಿದೆ. ಈ ಯಜ್ಞದಲ್ಲಿ ಎನ್ ಆರ್ ಐಗಳೂ ಕೂಡ ಬೆಂಬಲವನ್ನು ನೀಡಿದ್ದು, ಕಾಳಧನಿಕರ ವಿರುದ್ಧ ಸರ್ಕಾರದ ಯಜ್ಞಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.

No Comments

Leave A Comment