Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ಲಕ್ನೋ:ಗುಡಿಸಲಿಗೆ ನುಗ್ಗಿದ ಮಾಜಿ ಶಾಸಕನ ಪುತ್ರನ ಕಾರು; ನಾಲ್ವರು ಬಲಿ

ಲಕ್ನೋ : ಇಲ್ಲಿನ ದಾಲಿಬಾಗ್‌ ಪ್ರದೇಶದಲ್ಲಿ ಮಾಜಿ ಶಾಸಕನೊಬ್ಬನ ಕಾರು  ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿ ನಾಲ್ವರು ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅವಘಡದಲ್ಲಿ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕಂಠ ಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದುದೆ ಘಟನೆಗೆ ಕಾರಣ ಎನ್ನಲಾಗಿದೆ. ಕಾರಿನಲ್ಲಿದ್ದ ಮಾಜಿ ಶಾಸಕನ ಪುತ್ರ , ಓರ್ವ ಉದ್ಯಮಿಯ ಪುತ್ರನನ್ನು ಪೊಲೀಸರು ಬಂಧಿಸಿದ್ದು, ಕಾರಿನಲ್ಲಿದ್ದ ಇನ್ನುಳಿದ ಮೂವರು ಪರಾರಿಯಾಗಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

 

No Comments

Leave A Comment