Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಮೇಘಾಲಯ ಶಾಸಕ ಜೂಲಿಯಸ್ ಬಂಧನ

ಗುವಾಹಟಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್’ಬಾಕ್ ದೋರ್ಫಾಂಗ್ ಅವರನ್ನು ಗುವಾಹಟಿಯ ಗೊರ್’ಚುಕ್ ಪ್ರದೇಶದಲ್ಲಿ ಶನಿವಾರ ಬಂಧನಕ್ಕೊಳಪಡಿಸಲಾಗಿದೆ.14 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಸಕ ಜೂಲಿಯಸ್ ಅವರು ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಕುಟುಂದವರು ಡಿ.16 ರಂದು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೂಲಿಯಸ್ ಕಿತ್’ಬಾಕ್ ದೋರ್ಫಾಂಗ್ ಅವರು ನಾಪತ್ತೆಯಾಗಿದ್ದರು.

ನಂತರ ದೋರ್ಫಾಂಗ್ ಅವರ ಬಂಧನಕ್ಕೆ ಮೇಘಾಲಯ ಪೊಲೀಸರು ಲುಕ್’ಔಟ್ ನೊಟೀಸ್ ಜಾರಿ ಮಾಡಿತ್ತು. ತದನಂತರ ಶಾಸಕ ಗುವಾಹಟಿಯಲ್ಲಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಮೇಘಾಲಯ ಪೊಲೀಸರು ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಅಸ್ಸಾಂ ಹಾಗೂ ಮೇಘಾಲಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಶಾಸಕ ದೋರ್ಫಾಂಗ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೋರ್ಫಾಂಗ್ ಅವರು ಪಕ್ಷೇತರ ಶಾಸಕರಾಗಿದ್ದು, ಮೇಘಾಲಯದಲ್ಲಿನ ಆಳುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಕಳೆದ ತಿಂಗಳು ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸುತ್ತಿದ್ದ ವೇಳೆ ಗೆಸ್ಟ್ ಹೌಸ್ ನ ನೌಕರನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಸೆಕ್ಸ್ ಜಾಲ ಬೆಳಕಿಗೆ ಬಂದಿತ್ತು. ಸೆಕ್ಸ್ ಜಾಲದಿಂದ ಪಾರಾದ ಬಳಿಕ ವಿಚಾರಣೆ ವೇಳೆ ಬಾಲಕಿ ಕೆಲವರ ಹೆಸರನ್ನು ಹೇಳಿಕೊಂಡಿದ್ದಳು

No Comments

Leave A Comment