Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ವಂ ಪ್ರೇರಿತ ದೂರು ದಾಖಲಿಸಿದ ಪೊಲೀಸರು

ಶಿರಸಿ : ಉತ್ತರ ಕನ್ನಡ ಬಿಜೆಪಿ ಸಂಸದ ತಾಯಿ ಕೆಲವು ದಿನಗಳ ಹಿಂದೆ  ಶಿರಸಿಯ ಟಿ.ಎಸ್.ಎಸ್.ಆಸ್ಪತ್ರೆಯಲ್ಲಿ ದಾಖಲು ಆಗಿದ್ದರು ,ಸಂಸದರು ಆಸ್ಪತ್ರೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ  ಸಂಸದರು  ಆಕ್ರೋಶಗೊಂಡು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು  ಈ ಬಗ್ಗೆ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿ ಮಾಧ್ಯಮಗಳಲ್ಲಿ ಬಾರಿ ಸದ್ದು ಮಾಡಿತ್ತು  ಘಟನೆಗೆ ಸಂಬಂಧಿಸಿ ದೂರು ಪ್ರತಿ ದೂರು ದಾಖಲಾಗಿ ರಾಜಿ ಸಂಧಾನದಲ್ಲಿ ಪ್ರಕರಣಕ್ಕೆ ಪೂರ್ಣ ವಿರಾಮ ಬಿದ್ದಿತ್ತು .

ಘಟನೆಗೆ ಸಂಬಂಧಿಸಿ ವೈದ್ಯರ ಸಂಘದ ಪದಾಧಿಕಾರಿಗಳು ವೈದ್ಯರ ಮೇಲೆ ನಡೆಸಿದ  ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು ರಾಜ್ಯ ವೈದ್ಯಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಡಾ ರವೀಂದ್ರ ನೇತೃತ್ವದ ಸದಸ್ಯರು ಗ್ರಹ ಸಚಿವರನು ಭೇಟಿ ಮಾಡಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು ,ಇದೀಗ ಸಂಸದರ ವಿರುದ್ಧ ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ನಿನ್ನೆ ತಡರಾತ್ರಿ ಸಂಸದರ ವಿರುದ್ಧ ಸ್ವಂ ಪ್ರೇರಿತ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ 

No Comments

Leave A Comment