Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಖ್ಯಾತ ಬಾಲಿವುಡ್ ನಟ ಓಂಪುರಿ ಇನ್ನಿಲ್ಲ!

ಮುಂಬೈ: ಬಾಲಿವುಡ್ ನ ಖ್ಯಾತ ನಟ ಓಂಪುರಿ ಅವರು (66 ವರ್ಷ) ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.

ಮುಂಬೈನ ಅಂಧೇರಿಯಲ್ಲಿರುವ ನಟ ಓಂಪುರಿ ಅವರ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬುದ ಮೂಲಗಳು ತಿಳಿಸಿವೆ. ಖ್ಯಾತ ಚಿತ್ರ ನಿರ್ದೇಶಕ/ನಿರ್ಮಾಪಕ ಅಶೋಕ್ ಪಂಡಿತ್ ಅವರು ಓಂಪುರಿ ನಿಧನ ಸುದ್ದಿಯನ್ನು ಸ್ಪಷ್ಟಪಡಿಸಿದ್ದು, ಮನೆಯಲ್ಲೇ ಅವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಓಂಪುರಿ ಅವರು 1950 ಅಕ್ಟೋಬರ್ 18ರಂದು ಹರ್ಯಾಣದ ಅಂಬಾಲದಲ್ಲಿ ಜನಿಸಿದ್ದರು. 1976ರಲ್ಲಿ ಮರಾಠಿ ಚಿತ್ರ ಘಾಶಿರಾಮ್ ಕೋತ್ವಾಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಫ್ರೆಂಚ್ ಸೇರಿದಂತೆ ಸುಮಾರು 7ಕ್ಕೂ ಅಧಿಕ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ ತಬ್ಬಲಿ ನೀನಾದೆ ಮಗನೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಓಂಪುರಿ ಅವರು ಬಳಿಕ ಶಿವರಾಜ್ ಕುಮಾರ್ ಅಭಿನಯದ ಎಕೆ 47, ದರ್ಶನ್ ಅಭಿನಯದ ಧೃವ, ಸಂತೆಯಲ್ಲಿ ನಿಂತ ಕಬೀರ, ಟೈಗರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಇದಲ್ಲದೆ ತೆಲುಗು ಮತ್ತು ಮಲಯಾಳಂ ಭಾಷೆಗಳ ಹಲವು ಚಿತ್ರಗಳಲ್ಲಿ ನಟ ಓಂಪುರಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಕನ್ನಡ, ಹಿಂದಿ, ಇಂಗ್ಲೀಷ್, ಫ್ರೆಂಚ್, ತೆಲುಗು ಮತ್ತು ಮಲಯಾಳಂ ಸೇರಿದಂತೆ 7ಕ್ಕೂ ಅಧಿಕ ಭಾಷೆಗಳಲ್ಲಿ ಸುಮಾರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

2013ರಲ್ಲಷ್ಟೇ ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಅವರು ನಿಧನರಾಗಿದ್ದರು. ತಮ್ಮ ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಓಂಪುರಿ ಅವರು ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟ ಓಪುರಿ ಅವರ ನಿಧನಕ್ಕೆ ಬಾಲಿವುಡ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

No Comments

Leave A Comment