Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ತಾಲೂಕು ಮಟ್ಟದ ಯುವಜನ ಮೇಳ ಸಮಾರೋಪ:ಮೇಳಕ್ಕೆಯುವಕರ ಪಾಲ್ಗೊಳ್ಳುವಿಕೆ ಅತ್ಯಗತ್ಯ : ಡಾ.ರೋ ಕು.ಶೆಟ್ಟಿ

ಉಡುಪಿ: ಯುವಜನ ಮೇಳಕ್ಕೆ ೧೫ರಿಂದ ೩೦ವರ್ಷದೊಳಗಿನ ಮಂದಿ ಪಾಲ್ಗೊಳ್ಳಬೇಕು ಎಂಬ ನಿಯಮಾವಳಿಯಿದೆ. ಆದರೆ ಈ ವಯೋಮಿತಿಯ ಮಂದಿ ಫಿಲ್ಮ್ ಡ್ಯಾನ್ಸ್ ಮತ್ತಿತರ ಪ್ರಾಕಾರಗಳತ್ತ ಆಕರ್ಷಿತರಾಗಿದ್ದಾರೆಯೇ ಹೊರತು ಜಾನಪದ ಕಲಾ ಪ್ರಕಾರಗಳತ್ತ ಮನ ಮಾಡುತ್ತಿಲ್ಲ. ಹೀಗಾಗಿ ಯುವಜನ ಮೇಳದಂತಹ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಸಂಘಟಿಸುವುದು ಕಷ್ಟಕರವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಕಳೆದ ಭಾನುವಾರ ಮರ್ಣೆ ಸಮೀಪದ ಗುಂಡುಪಾದೆಯಲ್ಲಿ ಗುಂಡುಪಾದೆ ಗೆಳೆಯರ ಬಳಗ, ಜಿಪಂ, ಉಡುಪಿ ತಾಪಂ ಆಶ್ರಯದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಯುವಜನ ಮೇಳ ೨೦೧೬&೧೭ರ ಸಮಾರೋಪದಲ್ಲಿ ಮಾತನಾಡಿದರು.

ವಿಜೇತರಿಗೆ ಬಹುಮಾನ ವಿತರಿಸಿ ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರು ಮಾತನಾಡಿ ಅವಿಭಜಿತ ದ.ಕ. ಜಿಲ್ಲೆಗಳು ಜಾನಪದ ಕಲೆಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಯಕ್ಷಗಾನ, ದೈವರಾಧನೆ, ನಾಗಾರಾಧನೆ ಮೊದಲಾದ ಜಾನಪದ ಕಲಾಪ್ರಕಾರಗಳಿವೆ. ಇಲ್ಲಿಸಾಕಷ್ಟು ಉತ್ತಮ ಕಲಾವಿದ್ದರಿದ್ದು, ಅವರಿಗೆ ಸೂಕ್ತ ಅವಕಾಶ ನೀಡಬೇಕು ಎಂದರು.
ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಮನೋಹರ ಕುಂದರ್ ಅವರು ಮಾತನಾಡಿ ಯುವಜನ ಮೇಳಗಳಲ್ಲಿ ಬಹಳಷ್ಟು ತಂಡಗಳು ಭಾಗವಹಿಸಿದರೆ ಅದೊಂದು ಸಾಂಸ್ಕೃತಿಕ ಹಬ್ಬವೇ ಆಗಿ ಬಿಡುತ್ತದೆ. ಆದ್ದರಿಂದ ನಮ್ಮ ಯುವ ಯುವತಿ ಮಂಡಲಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗುಂಡುಪಾದೆ ಗೆಳೆಯರ ಬಳಗದ ಅಧ್ಯಕ್ಷ ಅಶೋಕ್ ನಾಯ್ಕ್, ಗುಂಡುಪಾದೆ ಮಹಿಳಾ ಸಮಾಜದ ಅಧ್ಯಕ್ಷೆ ವಿನ್ನಿ ಡಿಸೋಜಾ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ನಾರಾಯಣ ರಾವ್, ಮಣಿಪುರ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಕರ್ಕೇರ, ಪೆರಣಂಕಿಲ ಗ್ರಾಪಂ ಸದಸ್ಯೆ ರಶ್ಮಿ ಆರ್.ನಾಯಕ್ ಉಪಸ್ಥಿತರಿದ್ದರು.

ಭಾವಗೀತೆ, ಲಾವಣಿ, ಗೀಗೀ ಪದ, ಕೋಲಾಟ, ರಂಗಗೀತೆ, ಜಾನಪದ ಗೀತೆ, ಭಜನೆ, ವೀರಗಾಸೆ, ಡೊಳ್ಳು ಕುಣಿತ, ಚರ್ಮವಾದ್ಯ ಮೇಳ ಸೇರಿದಂತೆ ಸುಮಾರು ೧೨ ಸ್ಪರ್ಧೆಗಳು ನಡೆದವು.

ಗುಂಡುಪಾದೆ ಗೆಳೆಯರ ಬಳಗದ ಗೌರವಾಧ್ಯಕ್ಷ ಸದಾನಂದ ಪ್ರಭು ಅವರು ಸ್ವಾಗತಿಸಿ, ಅಧ್ಯಕ್ಷ ಅಶೋಕ್ ನಾಯ್ಕ್ ವಂದಿಸಿದರು. ಪ್ರಶಾಂತ್ ಪ್ರಭು ವಂದಿಸಿದರು.
ಈ ಸಂದರ್ಭದಲ್ಲಿ ಉಡುಪಿಯ ಕಲಾಕ್ಷೇತ್ರ ಗುಂಡಿಬೈಲು ಸಂಘಟನೆಯಿಂದ “ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಲೆ ನಡೆಯಿತು.

ಯುವಜನ ಮೇಳದ ಫಲಿತಾಂಶ :
ಯುವಕರ ವಿಭಾಗ :- ಭಜನೆ ಪ್ರಥಮ ಪಾಂಡುರಂಗ ಹವ್ಯಾಸಿ ಕಲಾ ಸಂಘ ಕೇಮುಂಡೇಲು, ದ್ವಿ=ಪಾಂಚಜನ್ಯ ಯುವಕ ಸಂಘ ಸಾಲಿಗ್ರಾಮ.ಲಾವಣಿ :ಪ್ರ ಸಂದೀಪ್ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗೆ. ಗೀಗೀಪದ: ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ಕೋಲಾಟ ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ದ್ವಿತೀಯ ಮಲ್ಲಿಕಾರ್ಜುನ ಕುಡುಬಿ ಜನಪದ ಕಲಾ ಸಂಘ ಮಂದಾರ್ತಿ. ರಂಗಗೀತೆ ಪ್ರಥಮ ಸಂದೀಪ್ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ಜಾನಪದ ಗೀತೆ ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ದ್ವಿತೀಯ ಪಾಂಚಜನ್ಯ ಯುವಕ ಸಂಘ ಸಾಲಿಗ್ರಾಮ. ಭಾವಗೀತೆ ಪ್ರಥಮ ಸಂದೀಪ್, ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ದ್ವಿತೀಯ ಅಜೇಯ ಸ್ಪೋರ್ಟ್ಸ್ ಕ್ಲಬ್ ಮರ್ಣೆ. ತೃತೀಯ ಭರತ್ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ಜಾನಪದ ನೃತ್ಯ ಪ್ರಥಮ ಮಲ್ಲಿಕಾರ್ಜುನ ಕುಡುಬಿ ಜನಪದ ಕಲಾ ಸಂಘ ಮಂದಾರ್ತಿ.

ವೀರಗಾಸೆ ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ಡೊಳ್ಳು ಕುಣಿತ ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ. ಚರ್ಮವಾದ್ಯ ಮೇಳ ಪ್ರಥಮ ಅಭಿನಯ ಜಾನಪದ ಹವ್ಯಾಸಿ ಕಲಾ ಸಂಘ ಕೋಡಿಬೇಂಗ್ರೆ.

ಯುವತಿಯರ ವಿಭಾಗ : ಭಜನೆ ಪ್ರಥಮ ಯುವತಿ ಮಂಡಲ ಇನ್ನಂಜೆ. ದ್ವಿತೀಯ ಮಹಿಳಾ ಸಮಾಜ ಗುಂಡುಪಾದೆ. ಲಾವಣಿ ಪ್ರಥಮ ಮಾಲಿನಿ ಶೆಟ್ಟಿ. ಯುವತಿ ಮಂಡಲ ಇನ್ನಂಜೆ. ಗೀಗೀಪದ ಪ್ರಥಮ ಯುವತಿ ಮಂಡಲ ಇನ್ನಂಜೆ. ಕೋಲಾಟ ಪ್ರಥಮ ಯುವತಿ ಮಂಡಲ ಇನ್ನಂಜೆ. ರಂಗಗೀತೆ ಪ್ರಥಮ ಸ್ವಾತಿ, ಯುವತಿ ಮಂಡಲ ಇನ್ನಂಜೆ. ಜಾನಪದ ಗೀತೆ ಪ್ರಥಮ ಯುವತಿ ಮಂಡಲ ಇನ್ನಂಜೆ. ದ್ವಿತೀಯ ಮಹಿಳಾ ಸಮಾಜ ಗುಂಡುಪಾದೆ. ಭಾವಗೀತೆ ಪ್ರಥಮ ಅಮೇಯ ತಂತ್ರಿ, ಕರಾವಳಿ ಯುವತಿ ವೃಂದ ಹೆಜಮಾಡಿ. ದ್ವಿತೀಯ ಶ್ಯಾಮಲ, ನವ್ಯಶ್ರೀ ಯುವತಿ ಮಂಡಲ ಕನ್ನರಪಾಡಿ. ತೃತೀಯ ರಂಜಿತಾ, ಮಹಿಳಾ ಸಮಾಜ ಗುಂಡುಪಾದೆ. ಜಾನಪದ ನೃತ್ಯ ಪ್ರಥಮ :ಯುವತಿ ಮಂಡಲ ಇನ್ನಂಜೆ. ರಾಗಿ ಬೀಸುವ ಪದ :ಪ್ರಥಮ ಯುವತಿ ಮಂಡಲ ಇನ್ನಂಜೆ. ಸೋಬಾನೆ ಪದ : ಪ್ರಥಮ ಮರಾಠಿ ಸಮಾಜ ಸೇವಾ ಸಂಘ.

No Comments

Leave A Comment