Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿ ಜೊತೆಗೆ ಮೈತ್ರಿ ಕಳಚಿಕೊಂಡ ಎಂಜಿಪಿ

ಪಣಜಿ: ಗೋವಾದ ಭಾರತೀಯ ಜನತಾ ಪಕ್ಷದ ಮುಂದಾಳತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಗುರುವಾರ ಹಿಂತೆಗೆದುಕೊಂಡಿದೆ.

ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸುದಿನ್ ಧಾವಳಿಕರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಎಂಜಿಪಿ ಈ ಘೋಷಣೆಯನ್ನು ಮಾಡಿ, ಬೆಂಬಲ ಹಿಂತೆಗೆದುಕೊಡಿರುವ ಪತ್ರವನ್ನು ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಅವರಿಗೆ ನೀಡಿದ್ದಾರೆ.

“ಈಗ ಚುನಾವಣಾ ಆಯೋಗ ೨೦೧೭ರ ವಿಧಾನಸಭಾ ಚುನಾವಣಾ ಘೋಷಿಸಿರುವುದರಿಂದ, ಕೇಂದ್ರ ಸಮಿತಿ ಅಥವಾ ಎಂಜಿಪಿ, ಬಿಜೆಪಿ ಜೊತೆಗೆ ಸಖ್ಯ ಮುಂದುವರೆಸದೆ, ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಧೃಢೀಕರಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಐದು ರಾಜ್ಯಗಳ 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತದ ಮತದಾನವನ್ನು ಚುನಾವಣಾ ಆಯೋಗ ಘೋಷಿಸಿತ್ತು. ಗೋವಾದಲ್ಲಿ ಫೆಬ್ರವರಿ 4 ರಂದು ಚುನಾವಣಾ ನಡೆಯಲಿದೆ.

No Comments

Leave A Comment