Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಚುನಾವಣೆ ಮುಗಿಯುವವರೆಗೂ ರಾಷ್ಟ್ರಪತಿಗಳು ಕೇಂದ್ರ ಬಜೆಟ್’ಗೆ ಅನುಮತಿ ನೀಡಬಾರದು: ಉದ್ಧವ್ ಠಾಕ್ರೆ

uddhav-thackerayಮುಂಬೈ: ಐದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳುವವರೆಗೂ ಬಜೆಟ್ ನಡೆಸಲು ಕೇಂದ್ರಕ್ಕೆ ರಾಷ್ಟ್ರಪತಿಗಳು ಅನುಮತಿ ನೀಡಬಾರದು ಎಂದು ಶಿವಸೇನೆ ಮುಖ್ಯಸ್ಧ ಉದ್ಧವ್ ಠಾಕ್ರೆಯವರು ಬುಧವಾರ ಹೇಳಿದ್ದಾರೆ.

ಜಿಲ್ಲಾ ಪಕ್ಷ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಅವರು, ಚುನಾವಣೆ ಹಾಗೂ ಕೇಂದ್ರದ ಬಜೆಟ್ ಕುರಿತಂತೆ ಶಿವಸೇನೆ ಸಂಸದರು ಶೀಘ್ರದಲ್ಲಿಯೇ ರಾಷ್ಟ್ರಪತಿಗಳನ್ನು ಭೇಟಿಯಾಗಲಿದ್ದಾರೆ. ಕೇಂದ್ರದ ಬಜೆಟ್ ಮೂಲಕ ಬಿಜೆಪಿ ಜನರನ್ನು ಹಾದಿತಪ್ಪಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.ಪಂಚ ರಾಜ್ಯಗಳ ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಬಜೆಟ್ ಏಕೆ ಮಂಡನೆ ಮಾಡಬೇಕು.

ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರ ಬಜೆಟ್ ಮಂಡನೆ ಮಾಡುವುದು ಸರಿಯಲ್ಲ. ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರದ ಬಜೆಟ್’ಗೆ ರಾಷ್ಟ್ರಪತಿಗಳು ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.

No Comments

Leave A Comment