Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಕಾಸರಗೋಡಿನಲ್ಲಿ ಮೂರು ದಿನಗಳ ನಿಷೇಧಾಜ್ಞೆ

bjp-cpm-clashಕಾಸರಗೋಡು: ಬುಧವಾರದಿಂದ ಶುಕ್ರವಾರದವರೆಗೆ ಸಾರ್ವಜನಿಕವಾಗಿ ಗುಂಪು ಕಟ್ಟದಂತೆ ಮತ್ತು ಯಾವುದೇ ಸಭೆ, ರ್ಯಾಲಿಗಳನ್ನು ನಡೆಸದಂತೆ ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಥಾಮ್ಸನ್ ಜೋಸ್ ನಿಷೇಧಾಜ್ಞೆ ಹೇರಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಕಾಸರಗೋಡು ಪಟ್ಟಣದ ಚೆರುವತೂರ್ ನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿ, ಹಿಂಸೆಗೆ ತಿರುಗಿರುವ ಹಿನ್ನಲೆಯಲ್ಲಿ ಈ ಎಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಎಚ್ಚರಿಕೆ, ಕೇರಳ ಪೊಲೀಸ್ ಕಾಯ್ದೆ 78 ಮತ್ತು 79 ರಡಿ ಈ ನಿಷೇಧಾಜ್ಞೆ ಹೇರಲಾಗಿದೆ. ಮೂರೂ ದಿನಗಳ ನಂತರ ಇದನ್ನು ಮರುಪರಿಶೀಲನೆ ನಡೆಸಲಾಗುತ್ತದೆ. ಈ ನಿಯಮಗಳಿಡಿ, ೧೫ ದಿನಗಳವರೆಗೆ ನಿಷೇಧಾಜ್ಞೆ ಹೇರುವ ಅವಕಾಶವಿರುತ್ತದೆ.

ಮಂಗಳವಾರ ಬಿಜೆಪಿ ಪಕ್ಷ ಕರೆದಿದ್ದ ಮುಷ್ಕರ ಕಾಸರಗೋಡು ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ಹಿಂಸೆಗೆ ತಿರುಗಿತ್ತು. ಮುಷ್ಕರದ ಬೆಂಬಲಿಗರು ಕಾರ್ ಗಳು, ಅಂಗಡಿ, ಬ್ಯಾಂಕ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ತಡೆಯಲು ಬಂದ ಪೋಲೀಸರ ಜೊತೆಗೂ ಘರ್ಷಣೆಗೆ ಇಳಿದಿದ್ದರು. ಸೋಮವಾರ ಚೆರುವತೂರ್ ನಲ್ಲಿ ‘ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡಿಗೆ’ ರ್ಯಾಲಿಗೆ ಸಿಪಿಎಂ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ದೂರಿ ಮುಷ್ಕರಕ್ಕೆ ಕರೆಕೊಟ್ಟಿದ್ದರು.

ಬುಧವಾರ ಸಂಜೆ, ಪ್ರತಿಭಟನಾ ಸಭೆ ಕರೆದಿದ್ದ ಸಿಪಿಎಂ ನಿಷೇಧಾಜ್ಞೆ ಹಿನ್ನಲೆಯಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದೆ.

No Comments

Leave A Comment