Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳ ಚುನಾವಣೆ ವೇಳಾಪಟ್ಟಿ ಪ್ರಕಟ: ಇಂದಿನಿಂದಲೇ ಚುನಾವಣಾ ನೀತಿ-ಸಂಹಿತೆ ಜಾರಿ

election-commissionನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಗೊಳಿಸಿದೆ.

ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ನಸೀಮ್ ಜೈದಿ ಅವರು ಪಂಚ ರಾಜ್ಯಗಳ ಚುನಾವಣಾ ದಿನಾಂಕಗಳನ್ನು ವಿವರಿಸಿದ್ದಾರೆ.ಅದರಂತೆ ಗೋವಾ ಮತ್ತು ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯಲಿದ್ದು, ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರ ಹಾಗೂ ಪಂಜಾಬ್ ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ  ನಡೆಯಲಿದೆ.

ಇನ್ನು ಉತ್ತರಾಖಂಡ ರಾಜ್ಯದ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 15ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಣಿಪುರದಲ್ಲಿ ಮಾರ್ಚ್ 4 ಮತ್ತು ಮಾರ್ಚ್ 8 ರಂದು ಎರಡು ಹಂತಗಳಲ್ಲಿ  ಮತದಾನ ನಡೆಯಲಿದೆ. ಮಣಿಪುರದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 11, ಫೆಬ್ರವರಿ 15, ಫೆಬ್ರವರಿ 19, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 4 ಮತ್ತು ಮಾರ್ಚ್ 8 ಮತದಾನ ನಡೆಯಲಿದೆ. ಇನ್ನು ಚುನಾವಣಾ ಆಯೋಗ ಘೋಷಣೆ ಮಾಡಿರುವಂತೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಐದೂ ರಾಜ್ಯಗಳಲ್ಲಿ ಒಟ್ಟು 16 ಕೋಟಿ ಮತದಾರರಿದ್ದು, ಒಟ್ಟು 690 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಐದೂ ರಾಜ್ಯಗಳಲ್ಲಿ ಒಟ್ಟು 1 ಲಕ್ಷ 85 ಸಾವಿರ ಮತಗಟ್ಟೆಗಳ ಸ್ಥಾಪನೆ ಮಾಡುವುದಾಗಿ ಆಯೋಗ ಹೇಳಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸುವುದಾಗಿ ಹೇಳಿದೆ. ಅಂತೆಯೇ ಮತದಾರರ ಪಟ್ಟಿಯಲ್ಲಿನ ಗೊಂದಲ ನಿವಾರಣೆಗಾಗಿ ಆಯೋಗ ಮುಂದಾಗಿದ್ದು, ಕಲರ್ ಫೋಟೋ ಸಹಿತ ಮತದಾರರ ಪಟ್ಟಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ. ಇನ್ನು ಮತದಾನದ ಗೌಪ್ಯತೆ ಕಾಪಾಡಲು ಮತಗಟ್ಟೆ ಎತ್ತರವನ್ನು 30 ಇಂಚುಗಳವರೆಗೆ ಏರಿಕೆ ಮಾಡಲು ಆಯೋಗ ನಿರ್ಧಾರಿಸಿದೆ.ಆಯೋಗ ಹೇಳಿರುವಂತೆ ಈಗಾಗಲೇ ಶೇ.100ರಷ್ಟು ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು, ಪ್ರತೀ ಮತಗಟ್ಟೆಯಲ್ಲೂ ನಾಲ್ಕು ಕಡೆಗಳಲ್ಲಿ ಮತದಾನದ ವೇಳೆ ನಿರ್ವಹಿಸಬೇಕಾದ ನಿಯಮಗಳನ್ನು ಪೋಸ್ಟರ್ ಮೂಲಕ ಅಂಟಿಸಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಮತ್ತು ನಾಮಪತ್ರದಲ್ಲಿ ಸಲ್ಲಿಕೆ ವೇಳೆ ಫೋಟೋ ಸಹಿತ ಗುರುತಿನ ಚೀಟಿ ಕಡ್ಡಾಯ ಎಂದು ಆಯೋಗ ಹೇಳಿದೆ.

No Comments

Leave A Comment