Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಶ್ರೀಕೃಷ್ಣ ಮಠದಲ್ಲಿ ಸ್ವಾಮಿ ಬ್ರಹ್ಮವಿಹಾರಿದಾಸ್‌

viharidas-3-1ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಂಗಳವಾರ ಅಂತಾರಾಷ್ಟ್ರೀಯ ಸ್ವಾಮಿನಾರಾಯಣ ಮಂದಿರಗಳ ಮುಖ್ಯಸ್ಥರಾದ ಶ್ರೀ ಸ್ವಾಮಿ ಬ್ರಹ್ಮ ವಿಹಾರಿದಾಸ್‌ ಆಗಮಿಸಿದರು. ಅವರನ್ನು ವಾದ್ಯ, ವೇದಘೋಷ ಸಹಿತ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಕೃಷ್ಣ ದೇವರ ದರ್ಶನ ಪಡೆದ ಬಳಿಕ ಚಂದ್ರಶಾಲೆಯಲ್ಲಿ ಅವರನ್ನು ಪರ್ಯಾಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಅಭಿಧಿನಂದಿಸಿದರು. ಈ ಸಂದರ್ಭ ದುಬಾೖಯಲ್ಲಿ ಮಂದಿರ ನಿರ್ಮಿಸಲು ಸಹಕರಿಸಿದ ಉದ್ಯಮಿ ಅಬ್ದುಲ್ ಜಬ್ಟಾರ್‌ ಅಲ್‌ ಸಯೀ, ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್‌. ಶೆಟ್ಟಿ, ಸ್ಥಳೀಯ ಉದ್ಯಮಿ ಶ್ರೀ ನಾಗೇಶ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.sgr_8032

ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬ್ರಹ್ಮವಿಹಾರಿದಾಸ್‌ ಅವರು ಇಲ್ಲಿನ ಇತಿಹಾಸಗಳನ್ನು ತಿಳಿದರು. ಸ್ವಾಮಿ ನಾರಾಯಣ ಮಂದಿರಗಳ ಹಿಂದಿನ ಸ್ವಾಮೀಜಿಯವರೊಂದಿಗೆ ತಮಗಿದ್ದ ಆತ್ಮೀಯ ಒಡನಾಟವನ್ನು, ಗುಜರಾತ್‌, ದಿಲ್ಲಿಯ ಮಂದಿರಗಳಿಗೆ ಭೇಟಿಕೊಟ್ಟಿರುವುದನ್ನು ಪೇಜಾವರ ಶ್ರೀಗಳು ತಿಳಿಸಿದರು.sgr_8041

No Comments

Leave A Comment