Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಜಿಲ್ಲಾ ಅಂತರ್ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ-ಮದುವೆ ಹೆಣ್ಣು, ಹೌಂದರಾಯನ ಒಲ್ಗ ಪ್ರಥಮ

05pk_nataka
ಮಲ್ಪೆ:ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ರಂಗಾಯಣ ಮೈಸೂರು ನೇತೃತ್ವದಲ್ಲಿ ಅಂತರ್ ಕಾಲೇಜು ರಾಜ್ಯಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆ ನಾಟಕ ವಿಭಾಗದಲ್ಲಿ ಹಂಗಾರಕಟ್ಟೆ ಬಿ.ಡಿ.ಶೆಟ್ಟಿ ಕಾಲೇಜಿನ ಮದುವೆ ಹೆಣ್ಣು ನಾಟಕ ಪ್ರಥಮ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೌಂದರಾಯನ ಓಲ್ಗ ವು ಪ್ರಥಮ ಪ್ರಶಸ್ತಿಯನ್ನು ಪಡೆದು ಕೊಂಡಿವೆ.05pk_janapada

ಉಡುಪಿ ಎಮ್.ಜಿ.ಎಮ್. ಕಾಲೇಜಿನ ರವೀಂದ್ರ ಮಂಟಪದಲ್ಲಿ ಜ.03 ಮತ್ತು ಜ.04 ರಂದು ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯನ್ನು ನಾಟಕ ವಿಭಾಗದಲ್ಲಿ ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಸೇವಂತಿ ಪ್ರಸಂಗ ಹಾಗೂ ಜಾನಪದ ವಿಭಾಗದಲ್ಲಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಸಾಳೆ, ಕಂಗೀಲು ನೃತ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಯ್ಕೆಯಾದ ಎಲ್ಲ ಕಾಲೇಜುಗಳು ಜ.09ರಂದು ಮೈಸೂರಿನ ರಂಗಾಯಣದಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿವೆ.

ಸ್ಪರ್ಧೆಯ ನಿರ್ಣಾಯಕರಾಗಿದ್ದ ಮಂಗಳೂರಿನ ಚಂದ್ರಹಾಸ್ ಉಳ್ಳಾಲ್, ಲಕ್ಷ್ಮಣ ಕುಮಾರ್ ಮಲ್ಲೂರು ಹಾಗೂ ಉಡುಪಿಯ ಯಾದವ್ ಕರ್ಕೇರ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ 70ರ ದಶಕದ ಬಳಿಕ ಮತ್ತೊಮ್ಮೆ ಯುವ ರಂಗಕಲಾವಿದರ ಹುಟ್ಟಿಗೆ ವೇದಿಕೆಯಾಗಿದೆ ಈ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ. ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಪೂರಕವಾಗಿರುವ ಈ ಮಾದರಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಪ್ರಶಸ್ತಿ ವಿಜೇತ ನಗದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿ ಪೂರ್ಣೆಮಾ ಹಾಗೂ ಹಿರಿಯ ರಂಗ ನಟ ಎಮ್.ಎಸ್.ಭಟ್ ವಿತರಿಸಿದರು. ಸ್ಪರ್ಧಾ ಸಮಿತಿಯ ಜಿಲ್ಲಾ ಸಂಚಾಲಕ ಪ್ರವೀಣ್ ಜಿ.ಕೊಡವೂರು ವಂದಿಸಿದರು. ಉಡುಪಿ ಜಿಲ್ಲೆಯ 10ಕಾಲೇಜುಗಳು ಸ್ಪರ್ಧೆಯ 2ವಿಭಾಗಗಳಲ್ಲಿ ಭಾಗವಹಿಸಿದರು.

No Comments

Leave A Comment