Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ, 32 ಮಂದಿ ಸಾವು

bagdadಬಾಗ್ದಾದ್‌: ಬಾಗ್ದಾದ್‌ ನ ನೆರೆಯ ನಗರ ಸದ್ರಾದಲ್ಲಿ ಸೋಮವಾರ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಮತ್ತು 61ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಮೃತಪಟ್ಟವರ ಪೈಕಿ ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದು, ಸದ್ರಾ ನಗರದ ಹೊರವಲಯದಲ್ಲಿ ದಿನದ ಕೂಲಿಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.

ಬಾಗ್ದಾದ್ ಈಶಾನ್ಯದಲ್ಲಿರುವ ಈ ನಗರವು ಶಿಯಾ ಬಾಹುಳ್ಯ ಹೊಂದಿದ್ದು ನಿರಂತರ ದಾಳಿಗೆ ಗುರಿಯಾಗಿದೆ.

ಪೊಲೀಸ್‌ ಕರ್ನಲ್‌ ಒಬ್ಬರ ಪ್ರಕಾರ ಈ ಆತ್ಮಾಹುತಿ ದಾಳಿಯಲ್ಲಿ 32 ಜನರು ಬಲಿಯಾಗಿದ್ದಾರೆ; 61 ಮಂದಿ ಗಾಯಗೊಂಡಿದ್ದಾರೆ. ಕಳೆದ ಶನಿವಾರವಷ್ಟೇ ಇಲ್ಲಿನ ಜನದಟ್ಟನೆಯ ಮಾರ್ಕೆಟ್‌ನಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ 27 ಮಂದಿ ಅಸುನೀಗಿದ್ದರು.

ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌(ಐಎಸ್‌) ದಾಳಿಯ ಹೊಣೆ ಹೊತ್ತಿದ್ದು, ದಾಳಿಯು ‘ಹುತಾತ್ಮರ ಕಾರ್ಯಾಚರಣೆ’ ಎಂದು ಘೋಷಿಸಿಕೊಂಡಿದ್ದು, ಘಟನೆಯಲ್ಲಿ ಒಟ್ಟು 40 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

No Comments

Leave A Comment