Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಧರ್ಮ ಮತ್ತು ಜಾತಿಯಾಧಾರದ ಮೇಲೆ ಮತ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

supremecourtನವದೆಹಲಿ: ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುನೀಡಿದೆ.

ಚುನಾವಣೆಯಲ್ಲಿ ಧರ್ಮ ಮತ್ತ ಜಾತಿಯಾಧಾರದ ಮೇಲೆ ಮತ ಯಾಚಿಸುವ ವಿರುದ್ಧ ದಾಖಲಾಗಿದ್ದ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾಂವಿಧಾನಕತಿ ಪೀಠವು, “ಚುನಾವಣೆ ಎಂಬುದು ಜಾತ್ಯಾತೀತ ಪ್ರಕ್ರಿಯೆಯಾಗಿದ್ದು, ಆ ನಿಟ್ಟಿನಲ್ಲೇ ಅದರ ಪ್ರಕ್ರಿಯೆಗಳು ನಡೆಯಬೇಕು. ರಾಜಕೀಯ ಪಕ್ಷಗಳು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಬಾರದು. ಚುನಾವಣೆಗಳಲ್ಲಿ ಜಾತ್ಯಾತೀತವಾದವೇ ಮುಂಚೂಣಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅಂತೆಯೇ ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳಾಗಲಿ ಅಥವಾ ಅಭ್ಯರ್ಥಿಗಳಾಗಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಬಾರದು ಎಂದು ಜಸ್ಟಿಸ್ ಟಿಎಸ್ ಠಾಕೂರ್ ನೇತೃತ್ವದ ಸಾಂವಿಧಾನಿಕ ಪೀಠ ಸೂಚನೆ ನೀಡಿದೆ.

No Comments

Leave A Comment