Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಚಿಕ್ಕಮಗಳೂರಿನಲ್ಲಿ 2 ಕಡವೆ ಬೇಟೆ: ಶಾರ್ಪ್ ಶೂಟರ್ ಸೇರಿ 11 ಮಂದಿ ಬಂಧನ

stagಚಿಕ್ಕಮಗಳೂರು: ಹೊಸ ವರ್ಷಾಚರಣೆಗೆಂದು ಚಿಕ್ಕಮಗಳೂರಿನ ತರಿಕೇರೆ ತಾಲೂಕಿನ ಬೆತ್ತಿಚೌಕಕ್ಕೆ ಬಂದಿದ್ದ ಪ್ರವಾಸಿಗರ ತಂಡವೊಂದು ತಡ ರಾತ್ರಿ ಬೇಟೆಯಾಡಿ 2 ಕಡವೆಗಳನ್ನು ಹತ್ಯೆ ಮಾಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರರಾಗಿರುವ 12 ಮಂದಿ ತಂಡ ಕಳೆದ ರಾತ್ರಿ 2 ಗಂಟೆ ಸುಮಾರಿನಲ್ಲಿ ಬೆತ್ತಿಚೌಕದಲ್ಲಿ ಬೇಟೆಗೆ ತೆರಳಿ 1 ಗಂಡು ಮತ್ತು 1 ಹೆಣ್ಣು ಕಡವೆಯನ್ನು ಬೇಟೆಯಾಡಿದ್ದಾರೆ. ಬೇಟೆಯಾಡಿ ಮರಳಿ ಬರುವಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಪ್ರವಾಸಿ ತಂಡಕ್ಕೆ ಸಹಾಯಕನಾಗಿದ್ದ ಸ್ಥಳೀಯನಾದ ರಫೀಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.

ಇದರಲ್ಲಿ ಚಿನ್ನದ ಪದಕ ವಿಜೇತ ಶಾರ್ಪ್ ಶೂಟರ್ 29 ವರ್ಷದ ಸಮೀರ್ ಸಹ ಇದ್ದು 11 ಮಂದಿಯನ್ನು ತರಿಕೇರೆ ಜೆಎಂಎಫ್ಸಿ ಕೋರ್ಟ್ ನ ನ್ಯಾಯಾಧೀಶರ ಮನೆಗೆ ಕರೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 11 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಇನ್ನು ತಲೆ ಮರೆಸಿಕೊಂಡಿರುವ ರಫೀಕ್ ಎಂಬಾತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

No Comments

Leave A Comment