Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಳಗಾವಿ: ಕಾಡಿನಲ್ಲಿ ನಿರ್ಮಿಸಿದ್ದ ಅಕ್ರಮ ರೆಸಾರ್ಟ್ ನೆಲಸಮ

bgm-new

ಬೆಳಗಾವಿ : ಖಾನಾಪುರ ತಾಲೂಕಿನ ಚಿಕಾಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ  ಅನಧಿಕೃತ ಸೌತಿರಾ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಅದಕ್ಕೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿರಲಿಲ್ಲ.

ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ಸೌತಿರಾ ರೆಸಾರ್ಟ್ ಅನ್ನು ಡಿಸೆಂಬರ್ 27 ರಂದು ನೆಲಸಮಗೊಳಿಸಲಾಗಿದೆ.ಭೀಮಗಡ ವನ್ಯಧಾಮದಲ್ಲಿ ಈ ರೆಸಾರ್ಟ್ ನಿರ್ಮಿಸಲಾಗಿತ್ತು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಲವು ಬಾರಿ ನ ನೊಟೀಸ್ ನೀಡಿದ್ದರು ರೆಸಾರ್ಟ್ ಮಾಲೀಕರು ಪ್ರತಿಕ್ರಿಯಿಸಿರಲಿಲ್ಲ. ಅರಣ್ಯ ಇಲಾಖೆ ಹಲವು ಬಾರಿ ನೊಟೀಸ್ ನೀಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಈ ಸಂಬಂಧ ಅರಣ್ಯ ಇಲಾಖೆ ಬೆಳಗಾವಿ ಜಿಲ್ಲಾಡಳಿತಕ್ಕೆ ರೆಸಾರ್ಟ್ ತೆರವುಗೊಳಿಸುವಂತೆ ಸೂಚಿಸಿತ್ತು, ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ತೆರವು ಕಾರ್ಯ ಮಾಡಿದ್ದಾರೆ. ಇನ್ನು ಭವಿಷ್ಯದಲ್ಲಿ  ಅರಣ್ಯ ಪ್ರದೇಶದಲ್ಲಿ ಇಂಥ ಅನಧಿಕೃತ ರೆಸಾರ್ಟ್ ನಿರ್ಮಾಣ ಆಗುವುದಿಲ್ಲ ಎಂದು ಜಿಲ್ಲಾ ಅರಣ್ಯಾಧಿಕಾರಿ ತಿಳಿಸಿದ್ದಾರೆ.

No Comments

Leave A Comment