Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಆರ್ ಟಿಐ ಕಾರ್ಯಕರ್ತ ಕೊಲೆ ಪ್ರಕರಣ: ಮುಡಾ ಎಂಜಿನೀಯರ್ ಸೇರಿ ಐರು ಮಂದಿ ಬಂಧನ

arrest-newಮೈಸೂರು: ಆರ್ ಟಿ ಐ ಕಾರ್ಯಕರ್ತ ಶ್ರೀನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಡಾ ಸಹಾಯಕ ಎಂಜಿನೀಯರ್ ಮೇಲೆ ಹಲವು ಅನುಮಾನಗಳು ಮೂಡಿವೆ. 

 ಆರ್ ಟಿ ಐ ಕಾರ್ಯಕರ್ತ ಶ್ರೀನಾಥ್ ಅವರನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಕಾವೇರಿ ನದಿ ದಡದ ಮೇಲೆ ಶವವನ್ನು ಬಿಸಾಡಿ ಹೊಗಿದ್ದರು, ಕೊಲೆ ಪ್ರಕರಣ ಸಂಬಂಧ ಮುಡಾ ಸಹಾಯಕ ಎಂಜಿನೀಯರ್, ಆತನ ಕಾರು ಚಾಲಕ ಸೇರಿದಂತೆ     ಒಟ್ಟು ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಡಾ ಎಂಜಿನೀಯರ್ ಮತ್ತು  ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ಕೆಲ ಮಂದಿ ತಮ್ಮ ಸಹೋದರ ಶ್ರೀನಾಥ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ಮೃತ ಶ್ರೀನಾಥ್ ಸಹೋದರರು ಆರೋಪಿಸಿದ್ದಾರೆ.

ಶ್ರೀನಾಥ್ ಬೆಂಎಲ್ ಸೊಸೈಟಿಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಾಹರದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ. ಜೊತೆಗೆ ಇತ್ತೀಚಿಗೆ ಮೂಡಾ ಸಹಾಯಕ ಇಂಜಿನಿಯರ್ ಮಹೇಶ ವಿರುದ್ಧ ಎಸಿಬಿ ಹಾಗೂ ಐಟಿ ಅಧಿಕಾರಿಗಳಿಗೂ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಮೂಡಾ ಸಹಯಕ ಇಂಜಿನಿಯರ್ ಮಹೇಶ ಮನೆಯ ಮೇಲೆ  ಎಸಿಬಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ನಗದು ವಶಪಡಿಸಿಕೊಂಡಿತ್ತು. ಅಲ್ಲದೇ ಕಳೆದ ವಾರ ಮೂಡಾದ ಇನ್ನೊಬ್ಬ ಇಂಜಿನಿಯರ್ ದಿನೇಶ ಎಂಬುವವರ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಕುರಿತು ಎಸಿಬಿಗೆ ದೂರು ನೀಡಿದ್ದ. ಆದ್ದರಿಂದ ನನ್ನ ತಮ್ಮನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಅಣ್ಣ ಶ್ರೀನಿವಾಸ್ ಆರೋಪಿಸಿದ್ದಾರೆ

No Comments

Leave A Comment