Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ನೋಟು ಬದಲಾವಣೆಗಾಗಿ ಎನ್ಆರ್ ಐ ಗಳಿಗೆ ಶೀಘ್ರವೇ ಆರ್ ಬಿಐ ನಿಂದ ಸೌಲಭ್ಯ ಘೋಷಣೆ

rbi-2ನವದೆಹಲಿ: ಅನಿವಾಸಿ ಭಾರತೀಯರು ಹಾಗೂ ನ.9 ರಿಂದ ಡಿ.30 ರ ವರೆಗೆ ವಿದೇಶಗಳಲ್ಲಿದ್ದ ಭಾರತೀಯರಿಗೆ ತಮ್ಮ ಬಳಿ ಇರುವ ಹಳೆಯ 500 1000 ರೂ ನೋಟುಗಳನ್ನು ಹೊಸ 500, 2000 ರೂ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸೌಲಭ್ಯವನ್ನು ಜಾರಿಗೆ ತರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಘೋಷಣೆ ಮಾಡಿದೆ.

ಆರ್ ಬಿಐ ನ ಅಧಿಸೂಚನೆ ಪ್ರಕಾರ ನ.9 ರಿಂದ ಡಿ.30 ರ ವರೆಗೆ ವಿದೇಶದಲ್ಲಿದ್ದ ಭಾರತೀಯರು ಮಾ.31, 2017 ರ ವರೆಗೆ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇನ್ನು ಅನಿವಾಸಿ ಭಾರತೀಯರು(ಎನ್ಆರ್ ಐ) ಗಳಿಗೆ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಜೂ.30 ವರೆಗೆ ಕಾಲಾವಕಾಶ ನೀಡಲಾಗಿದೆ.

ನ.9 ರಿಂದ ಡಿ.30 ವರೆಗೆ ವಿದೇಶದಲ್ಲಿದ್ದ ಭಾರತೀಯರಿಗೆ ನೋಟು ಬದಲಾವಣೆ ಮಾಡಿಕೊಳ್ಳಲು ಯಾವುದೇ ಮಿತಿ ವಿಧಿಸಲಾಗಿಲ್ಲ. ಆದರೆ ಅನಿವಾಸಿ ಭಾರತೀಯರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆಯಲ್ಲಿ ವಿಧಿಸಲಾಗಿರುವ ಮಿತಿ ಅನ್ವಯವಾಗಲಿದ್ದು, ಇಂತಿಷ್ಟೇ ರೂಪಾಯಿಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂಬ ನಿಯಮ ಇರಲಿದೆ ಎಂದು ಆರ್ ಬಿಐ ತಿಳಿಸಿದೆ.

ಜ.2 ರಿಂದ ವಿಶೇಷ ಸೌಲಭ್ಯ ಜಾರಿಗೆ ಬರಲಿದೆ, ನೇಪಾಳ, ಭೂತಾನ್, ಪಾಕಿಸ್ತಾನ ಬಾಂಗ್ಲಾದಲ್ಲಿರುವ ಭಾರತೀಯರಿಗೆ ಈ ವಿಶೇಷ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ಹೇಳಿದೆ.

No Comments

Leave A Comment