Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಗುಡ್‌ ಬೈ- 2016: ರಾತ್ರಿ 2 ಗಂಟೆ ತನಕ ಹೊಸ ವರ್ಷಾಚರಣೆಗೆ ಅವಕಾಶ

39ಬೆಂಗಳೂರು: ನೋಟು ರದ್ದತಿ ಮತ್ತು ಅದರ ಪರಿಣಾಮವಾಗಿ ಕಾಡುತ್ತಿರುವ ಕರೆನ್ಸಿ ಕೊರತೆ ಮಧ್ಯೆಯೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಗರದಲ್ಲಿ ಹಣದ ಹೊಳೆ ಹರಿಯಲಿದೆ. ಆದರೆ,ಅದೆಲ್ಲವೂ ಬಹುತೇಕ ಕ್ಯಾಷ್‌ಲೆಸ್‌ ಆಗಿರಲಿದೆ.

ಹೊಸ ವರ್ಷದ ಸಂಭ್ರಮಕ್ಕೆ “ಹಾಟ್‌ ಸ್ಪಾಟ್‌’ ಎಂ.ಜಿ. ರಸ್ತೆ ಸೇರಿದಂತೆ ಇಡೀ ನಗರ ತುದಿಗಾಲಲ್ಲಿ ನಿಂತಿದೆ. ಪ್ರತಿ ವರ್ಷದಂತೆ ಈ ಬಾರಿಯ ವರ್ಷಾಚರಣೆಗೂ ಸಂಗೀತ, ನೃತ್ಯ, ಪಾನಗೋಷ್ಠಿಯಂತಹ ಮನರಂಜನೆ, ಪಿಕ್‌ಅಪ್‌ ಡ್ರಾಪ್‌, ಮಕ್ಕಳನ್ನು ಕೆಲಹೊತ್ತು ನೋಡಿಕೊಳ್ಳುವ ವ್ಯವಸ್ಥೆ, ಹೆಚ್ಚುವರಿ ಸಂಚಾರ ಸೇವೆ ಎಲ್ಲವೂ ಇದೆ. ಇದೆಲ್ಲದರೊಂದಿಗೆ ಕ್ಯಾಷ್‌ಲೆಸ್‌ ವಹಿವಾಟಿನ ಸೌಲಭ್ಯವೂ ಸೇರಿಕೊಂಡಿದೆ. ಒಂದೂವರೆ ತಿಂಗಳಿಂದ ಎಲ್ಲೆಡೆ ನಗದು ಕೊರತೆ ಎದ್ದುಕಾಣುತ್ತಿದೆ. ಆದ್ದರಿಂದ ಜನರನ್ನು ಸೆಳೆಯಲು ಹೋಟೆಲ್‌, ಪಬ್‌ ಗಳು “ಕ್ಯಾಷ್‌ಲೆಸ್‌ ವಹಿವಾಟು’ ಸೇವೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

ಪಾನಗೋಷ್ಠಿ, ಮ್ಯಾಜಿಕ್‌ ಷೋ, ಸಂಗೀತ, ಊಟ ಮತ್ತಿತರ ಸೇವೆಗಳೊಂದಿಗೆ ಸ್ವಾಗತಿಸಲು ಪ್ರವಾಸಿ ತಾಣಗಳು, ಹೋಟೆಲ್‌-ಪಬ್‌ಗಳು ಸಜ್ಜುಗೊಂಡಿವೆ. ಅದರಲ್ಲೂ ವಾರಾಂತ್ಯಕ್ಕೆ ಹೊಸ ವರ್ಷಾಚರಣೆ ಬಂದಿದ್ದರಿಂದ ಸಂಭ್ರಮ ಇಮ್ಮಡಿಗೊಳ್ಳಲಿದೆ. ನೀರಲ್ಲಿ ಕುಳಿತು ಪಾರ್ಟಿ ಮಾಡುವುದು, ಟೂರಿಸ್‌ಂ ಡಾಟ್‌ ಕಾಮ್‌ನಲ್ಲಿ ಪ್ರವಾಸಿ ತಾಣಗಳಲ್ಲಿ ವಿಶೇಷ ವ್ಯವಸ್ಥೆ, ಡಿಜೆಗಳ ದರ್ಬಾರು ವರ್ಷಾಚರಣೆ ರಂಗೇರುವಂತೆ ಮಾಡಲಿದೆ.

20 ಸಿಸಿಟೀವಿ ಕಣ್ಗಾವಲು

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದ್ಯಾಂತ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷ ಸಂಭ್ರಮಾಚರಣೆಗೆ ನೀಡಲಾಗಿದ್ದಕಾಲ ಮಿತಿಯನ್ನು ಒಂದು ಗಂಟೆ ವಿಸ್ತರಿಸಿದ್ದು, ತಡ ರಾತ್ರಿ 2 ಗಂಟೆವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ಪೊಲೀಸರು ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪೊಲೀಸ್‌ ಎನ್‌.ಎಸ್‌. ಮೇಘರಿಕ್‌, ನಗರದ ಭದ್ರತೆಗೆ ಸುಮಾರು 16 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ಈ ಪೈಕಿ 30 ಸಿಎಆರ್‌ ತುಕಡಿ, 40 ಕೆಎಸ್‌ಆರ್‌ಪಿ ತುಕಡಿ ಹಾಗೂ ಮಹಿಳಾ ಸಿಬ್ಬಂದಿ, ಹೋಂ ಗಾರ್ಡ್‌ ಸೇರಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ರಾತ್ರಿ ಇಡೀ ಹೊಯ್ಸಳ ಗಸ್ತು ವಾಹನಗಳು ಗಸ್ತು ತಿರುಗಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮಫ್ತಿ ಯಲ್ಲಿನ ಸಿಬ್ಬಂದಿ ಇರಲಿದ್ದಾರೆ ಎಂದು ಹೇಳಿದರು. ಇನ್ನು ಎಂ.ಜಿ.ರಸ್ತೆ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಲಾಗಿದ್ದು, 20 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅನಿಲ್‌ ಕುಂಬ್ಳೆ ಸರ್ಕಲ್‌ ಹಾಗೂ ಕಾವೇರಿ ಎಂಪೋರಿಯಂ ಬಳಿ ಲೋಹ ಪರಿಶೋಧಕ ಯಂತ್ರಗಳನ್ನು ಅಳವಡಿಸಲಾದೆ.

ಕಾವೇರಿ ಎಂಪೋರಿಯಂ ಮೂಲಕ ಪ್ರವೇಶ
ಬ್ರಿಗೇಡ್‌ ರಸ್ತೆಗೆ ಕಾವೇರಿ ಎಂಪೋರಿಯಂ ಮೂಲಕವೇ ಸಾರ್ವಜನಿಕರು ಪ್ರವೇಶಿಸಬೇಕು. ಚರ್ಚ್‌ ಸ್ಟ್ರೀಟ್‌, ಆರ್‌ಎಚ್‌ಪಿ ರಸ್ತೆ ಮೂಲಕ ಬ್ರಿಗೇಡ್‌ ರಸ್ತೆಗೆ ಸಂಚಾರ ನಿರ್ಬಂಧಿಸಲಾಗಿದೆ. ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ 10 ವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಜನರ ಮೇಲೆ ಕಣ್ಗಾವಲಿಗಾಗಿ ನೈಟ್‌ ವಿಷನ್‌ ಬೈನಾಕ್ಯೂಲರ್‌ ಗಳನ್ನು ಬಳಸಲಾಗುತ್ತಿದೆ. ಎಂ.ಜಿ. ರಸ್ತೆ ಸರಹದ್ದಿನ ಹೋಟೆಲ್‌, ಮಾಲ್‌ ಗಳು, ಕ್ಲಬ್‌ಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ ಗಳ ಮಾಲೀಕರ ಸಭೆ ಕರೆದು, ವರ್ಷಾಚರಣೆ ಕಾರ್ಯಕ್ರಮದ ವೇಳೆ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೇಲ್ಸೇತುವೆ ಬಂದ್‌
ವಿಶೇಷ ತಪಾಸಣೆ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದುವಾಹನ ಚಲಾಯಿಸಿ ಮೇಲ್ಸೇತುವೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲಾ ಮೇಲ್ಸುತ್ತುವೆಗಳ ಮೇಲಿನ ಸಂಚಾರವನ್ನು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6 ಗಂಟೆ ತನಕ ನಿರ್ಬಂಧಿಸಲಾಗಿದೆ. ಮದ್ಯ ಸೇವಿಸಿ ಬೈಕ್‌, ಕಾರು ಚಾಲನೆ ಮಾಡಿದರೆ ದಂಡ ವಿಧಿಸಬೇಕಾಗುತ್ತದೆ. ಹೊಸವರ್ಷಾಚರಣೆ ವೇಳೆ ಇಡೀ ರಾತ್ರಿ ಸಂಚಾರ ಪೊಲೀಸರು ಹೆಚ್ಚುವರಿಯಾಗಿ ಕಾರ್ಯಾಚರಣೆ ನಡೆಸಲಿದ್ದು, ನಿಯಮ ಉಲ್ಲಂ ಸಿದ ವಾಹನ ಸವಾರರ ಮೇಲೆ ಸೂಕ್ತಕ್ರಮಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೀತೇಂದ್ರ ತಿಳಿಸಿದರು.

ತಡರಾತ್ರಿವರೆಗೆ ಬಿಗ್‌-10 ಬಸ್‌ಗಳ ಸಂಚಾರ
ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಂ.ಜಿ. ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಶನಿವಾರ ರಾತ್ರಿ 10.30ರಿಂದ ತಡರಾತ್ರಿ 2ರವರೆಗೆ ಬಿಗ್‌-10 ಮಾರ್ಗಗಳನ್ನು ವಿಸ್ತರಣೆ ಮಾಡಿ ಆಚರಣೆಗೊಳಿಸಲು ಹಾಗೂ ಅಂದು ಎಲ್ಲ ರಾತ್ರಿ ಸೇವೆ ಅನುಸೂಚಿಗಳನ್ನು ಆಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಮಂತ್ರಿ ಮಾಲ್‌ ಮೆಟ್ರೋ ರೈಲು ನಿಲ್ದಾಣದಿಂದ ಕೆಂಪೇಗೌಡ ಬಸ್‌ ನಿಲಾœಣಕ್ಕೆ ಮತ್ತು ಎಂ.ಜಿ. ರಸ್ತೆ ಬಸ್‌ ನಿಲ್ದಾಣಕ್ಕೆ ಹಾಗೂ ಶಿವಾಜಿನಗರ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣಗಳಿಂದ ಸಂಚಾರದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಘುವುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಹೆಚ್ಚುವರಿ ಕಾರ್ಯಾಚರಣೆ ಮಾಡಲಿರುವ ಬಸ್‌ ಮಾರ್ಗಗಳ ವಿವರ ಹೀಗಿದೆ.

ಸಂಖ್ಯೆ ಎಲ್ಲಿಂದ ಎಲ್ಲಿಗೆ
ಜಿ-1 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಕಾಡುಗೋಡಿ ಬಸ್‌ ನಿಲ್ದಾಣ
ಜಿ-1 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಕಾಡುಗೋಡಿ ಬಸ್‌ ನಿಲ್ದಾಣ
ಜಿ-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸಜಾìಪುರ
ಜಿ-3 ಬ್ರಿಗೇಡ್‌ ರಸ್ತೆ ಎಲೆಕ್ಟ್ರಾನಿಕ್‌ ಸಿಟಿ
ಜಿ-4 ಬ್ರಿಗೇಡ್‌ ರಸ್ತೆ ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌
ಜಿ-6 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಕೆಂಗೇರಿ ಹೌಸಿಂಗ್‌ ಬೋರ್ಡ್‌
ಜಿ-7 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಜನಪ್ರಿಯ ಟೌನ್‌ಶಿಪ್‌
ಜಿ-8 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ನೆಲಮಂಗಲ
ಜಿ-9 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಯಲಹಂಕ ಉಪನಗರ
ಜಿ-10 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಆರ್‌.ಕೆ.ಹೆಗಡೆ ನಗರ
ಜಿ-11 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಬಾಗಲೂರು

ಜಿ-12 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಹೊಸಕೋಟೆ

ಮಧ್ಯರಾತ್ರಿ 2 ಗಂಟೆ ವರೆಗೆ ಮೆಟ್ರೋ ಓಡಾಟ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ಶನಿವಾರ ವಿಸ್ತರಿಸಲಾಗಿದೆ. ಅಂದು ಮಧ್ಯರಾತ್ರಿ 2ರವರೆಗೆ ಸಂಚಾರ ಸೇವೆ ಲಭ್ಯವಾಗಲಿದೆ. ವಿಸ್ತರಣೆಗೊಂಡ ಅವಧಿಯಲ್ಲಿ ಪ್ರತಿ 30 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ. ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನಿಲ್ದಾಣ ಹಾಗೂ ರೀಚ್‌-3, 3ಎ ಮತ್ತು 3ಬಿಯ ಮಂತ್ರಿಸ್ಕ್ವೇರ್‌ ಸಂಪಿಗೆರಸ್ತೆಯಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ರೈಲುಗಳ ಸಂಚಾರ ಅವಧಿ ವಿಸ್ತರಣೆ ಅನ್ವಯ ಆಗಲಿದೆ
ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಪ್ರಕಟಣೆ ತಿಳಿಸಿದೆ.

ಎಂ.ಜಿ.ರಸ್ತೆ ಸುತ್ತ ನಿರ್ಬಂಧ

„ ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್‌ ಬಳಿಯ ರೆಸಿಡೆನ್ಸಿಯ ರಸ್ತೆ „

ಬ್ರಿಗೇಡ್‌ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ „

ಚರ್ಚ್‌ ಸ್ಟ್ರೀಟ್‌ರಸ್ತೆಯಲ್ಲಿ, ಬ್ರಿಗೇಡ್‌ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ ತನಕ „ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ.ರಸ್ತೆವರೆಗೆ „

ಕಾಮರಾಜ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಬ್ಬನ್‌ರಸ್ತೆ ಜಂಕ್ಷನ್‌ನಿಂದ ಕಾವೇರಿ ಎಂಪೋರಿಯಂವರೆಗೆ

No Comments

Leave A Comment