Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ:ಅಪರಿಚಿತ ಶವ ಪತ್ತೆ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ಟೂರಿಸ್ಟ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ೪೫ ವರ್ಷ ಪ್ರಾಯದ ಓರ್ವ ಅಪರಿಚಿತ ಗಂಡಸು ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದು, ಆತನ ಬಳಿ ಇದ್ದ ಆಸ್ಪತ್ರೆ ಚೀಟಿಯಲ್ಲಿ ಸುರೇಶ ಬಿನ್ ಲಕ್ಷಣ, ಬೆಳಗಿ ತಾಲೂಕು ಬಾಗಲಕೋಟೆ ಎಂದು ಬರೆದಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ವ್ಯಕ್ತಿಯು ೫.೫ ಅಡಿ ಉದ್ದ ಇದ್ದು, ಗೋಧಿ ಮೈಬಣ್ಣ ಸಪೂರ ಶರೀರ ಕಪ್ಪು ತಲೆ ಕೂದಲು ಹೊಂದಿರುತ್ತಾರೆ. ಸದರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಪೊಲೀಸ್ ಉಪನಿರೀಕ್ಷಕರು ಉಡುಪಿ ನಗರ ಠಾಣೆ ಅಥವಾ ವೃತ್ತ ನಿರೀಕ್ಷಕರು, ಉಡುಪಿ ವೃತ್ತ ದೂರವಾಣಿ ಸಂಖ್ಯೆ ೦೮೨೦-೨೫೨೦೪೪೪,೨೫೨೦೩೨೯ ಅಥವಾ ೯೪೮೦೮೦೫೪೪೫, ೯೪೮೦೮೦೫೪೩೦ ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. (ಫೋಟೋ ಲಗತ್ತಿಸಿದೆ)

No Comments

Leave A Comment