Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಭಾರತದಲ್ಲಿ ಪ್ರವಾಸಿಗರ ಮೇಲೆ ಉಗ್ರ ದಾಳಿ: ಎಚ್ಚರಿಕೆ ನೀಡಿದ ಇಸ್ರೇಲ್

goaಜೇರುಸಲೇಂ: ಹೊಸ ಸಂಭ್ರಮಾಚರಣೆಗಾಗಿ ಭಾರತ ಪ್ರವಾಸದಲ್ಲಿರುವ ತನ್ನ ನಾಗರಿಕರಿಗೆ ಇಸ್ರೇಲ್ ಉಗ್ರ ದಾಳಿಯ ಎಚ್ಚರಿಕೆಯನ್ನು ನೀಡಿದೆ.

ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ನಾಗರಿಗೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದಿರಿ ಎಂದು ಇಸ್ರೇಲ್ ನ ಭಯೋತ್ಪಾದನ ವಿರೋಧಿ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.

ಬೀಚ್ ಗಳು, ರೆಸ್ಟೋರೆಂಟ್ ಗಳು ಪ್ರವಾಸಿಗರೇ ಹೆಚ್ಚಾಗಿರುವ ಜಾಗಗಳಲ್ಲಿ ಉಗ್ರರು ದಾಳಿ ನಡೆಸುವ ಸಂಚು ರೂಪಿಸಿದ್ದಾರೆ. ಮುಖ್ಯವಾಗಿ ಪ್ರವಾಸಿ ತಾಣಗಳಾಗಿರುವ ಗೋವಾ, ಪುಣೆ, ಮುಂಬೈ ಮತ್ತು ಕೊಚ್ಚಿನ್ ಹೆಚ್ಚಿನ ಅಪಾಯ ಇರುವುದಾಗಿ ಎಚ್ಚರಿಸಿದೆ.

No Comments

Leave A Comment