Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮುಂದಿನ ವರ್ಷ ಡಬ್ಲ್ಯುಡಬ್ಲ್ಯುಇಗೆ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಎಂಟ್ರಿ

sushilನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮುಂದಿನ ವರ್ಷ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ವೆುಂಟ್(ಡಬ್ಲ್ಯುಡಬ್ಲ್ಯುಇ)ಗೆ ಪಾದಾರ್ಪಣೆ ಮಾಡಲಿದ್ದಾರೆ.

ದಿ ಗ್ರೇಟ್ ಖಲಿಯಂತೆ ಡಬ್ಲ್ಯುಡಬ್ಲ್ಯುಇಗೆ 33 ವರ್ಷದ ಸುಶೀಲ್ ಕುಮಾರ್ ವಿಶ್ವ ವೃತ್ತಿಪರ ಕುಸ್ತಿ ಲೀಗ್ ಗೆ ಎಂಟ್ರಿ ಕೊಡಲಿದ್ದಾರೆ. ಮನರಂಜನೆಯನ್ನು ಆದ್ಯತೆಯಾಗಿರಿಸಿಕೊಂಡಿರುವ ಡಬ್ಲ್ಯುಡಬ್ಲ್ಯುಇ ಲೀಗ್ 2017ರ ನವೆಂಬರ್ ನಲ್ಲಿ ನಡೆಯಲಿದೆ.

ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು, 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2016ರ ಒಲಿಂಪಿಕ್ಸ್ ವೇಳೆ ಸುಶೀಲ್ ಗೆ ತಮ್ಮ ವಿಭಾಗದಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.

No Comments

Leave A Comment