Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸಿರಿಯಾದ ಡಮಾಸ್ಕಸ್ ಮೇಲೆ ವಾಯು ದಾಳಿ: 6 ಮಕ್ಕಳು ಸೇರಿ 15 ಸಾವು

syriaಬೈರುತ್: ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಬಂಡೂಕೋರರ ಮೇಲೆ ವಾಯುದಾಳಿ ಮತ್ತು ಫಿರಂಗಿ ದಾಳಿಯಲ್ಲಿ 6 ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ.

ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಪೂರ್ವ ಗೌಟಾ ಭಾಗದಲ್ಲಿ ವಾಯುದಾಳಿ ಮತ್ತು ಫಿರಂಗಿ ದಾಳಿ ನಡೆದಿದ್ದು ಯಾವ ಭಾಗದಲ್ಲಿ ದಾಳಿಗಳಾಗಿವೆ ಎಂಬುದನ್ನು ಕೂಡಲೇ ನಿರ್ಧರಿಸಲು ಸಾಧ್ಯವಾಗಿಲ್ಲ. ಬಂಡೂಕೋರರು ಹೆಚ್ಚಾಗಿರುವ ಜಾಗಗಳ ಮೇಲೆ ಸಿರಿಯಾ ಸರ್ಕಾರ ಅಥವಾ ರಷ್ಯಾ ವಾಯು ದಾಳಿ ನಡೆಸಿದೆ ಎಂದು ಹೇಳಿದೆ.

ಬ್ರಿಟನ್ ಮೂಲದ ವೀಕ್ಷಣಾಲಯ ನಗರದ ಡೌಮಾ, ಹರಾಸ್ಟಾ, ಅರ್ಬಿನ್, ಜಮಾಲ್ಕ ಮತ್ತು ಸಕ್ಬಾಗಳಲ್ಲಿ ದಾಳಿ ನಡೆಸಿರುವುದಾಗಿ ಹೇಳಿದೆ. ಇನ್ನು ಸಿರಿಯಾ ರಾಜ್ಯದ ಟೆವಿಲಿಷನ್ ದಾಳಿಯಲ್ಲಿ ಏಳು ಮಂದಿಗೆ ಗಾಯಗಳಾಗಿರುವುದಾಗಿ ವರದಿ ಮಾಡಿದೆ.

2011ರ ನಂತರ ಸಿರಿಯಾ ಸರ್ಕಾರದ ವಿರುದ್ಧದ ಸಾರ್ವಜನಿಕರು ದಂಗೆ ಎದ್ದಿದ್ದು ಅಲ್ಲಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷದ 10 ಸಾವಿರ ಮಂದಿ ಮೃತಪಟ್ಟಿದ್ದಾರೆ.

No Comments

Sorry, the comment form is closed at this time.