Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಚಿನ್ನಮ್ಮ ಶಶಿಕಲಾ ನಟರಾಜನ್‌ ನಾಯಕತ್ವಕ್ಕೆ ಎಐಎಡಿಎಂಕೆ ನಿರ್ಣಯ

chinnama-700-1
ಚೆನ್ನೈ :
ಮಾಜಿ ಮುಖ್ಯಮಂತ್ರಿ ದಿ| ಜೆ ಜಯಲಲಿತಾ ಅವರ ಪರಮಾಪ್ತೆ “ಚಿನ್ನಮ್ಮ’ ಶಶಿಕಲಾ ನಟರಾಜನ್‌ ಅವರ ನಾಯಕತ್ವದಡಿ ಕೆಲಸ ಮಾಡುವ ಠರಾವನ್ನು ಇಂದು ಗುರುವಾರ ಎಐಎಡಿಎಂಕೆ ಜನರಲ್‌ ಕೌನ್ಸಿಲ್‌ ಕೈಗೊಂಡಿರುವ ಮಹತ್ವದ ವಿದ್ಯಮಾನ ನಡೆದಿದೆ.

ತಮಿಳು ನಾಡಿನ ಆಳುವ ಪಕ್ಷವಾಗಿರುವ ಎಐಎಡಿಎಂಕೆ ಇಂದು ಟ್ವಿಟರ್‌ನಲ್ಲಿ ನೀಡಿರುವ ಸಂದೇಶದ ಪ್ರಕಾರ ಚಿನ್ನಮ್ಮ ಶಶಿಕಲಾ ನಟರಾಜನ್‌ ಅವರ ಕೈಕೆಳಗೆ ಕೆಲಸ ಮಾಡುವ ನಿರ್ಧಾರವನ್ನು ಪಕ್ಷವು ಕೈಗೊಂಡಿರುವುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಹಾಗಿದ್ದರೂ ಶಶಿಕಲಾ ಅವರು ಖುದ್ದಾಗಿ ತಮ್ಮ ಒಪ್ಪಿಗೆಯನ್ನು ಈ ಬಗ್ಗೆ ನೀಡಿಲ್ಲ. ಈ ಕುರಿತಾದ ಅಧಿಕೃತ ಪ್ರಕಟನೆಯನ್ನು 2017ರ ಜನವರಿ 2ರಂದು ಮಾಡಲಾಗುವುದು ಎಂದು ತಿಳಿದು ಬಂದಿದೆ.

ತಮಿಳು ನಾಡು ಮುಖ್ಯಮಂತ್ರಿ ಪನೀರಸೆಲ್ವಂ ಸಹಿತವಾಗಿ ಎಐಎಡಿಎಂಕೆಯ ಎಲ್ಲ ಉನ್ನತ ನಾಯಕರು ಈ ನಿರ್ಣಾಯಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿಗಳಿಂದ ತಿಳಿದು ಬಂದಿರುವ ಪ್ರಕಾರ ಎಐಎಡಿಗಎಂಕೆ ಜನರಲ್‌ ಕೌನ್ಸಿಲ್‌ ಸಭೆಯಲ್ಲಿ ಅಗಲಿದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು ಮತ್ತು ಶಶಿಕಲಾ ನಟರಾಜನ್‌ ಅವರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡುವ ಠಾರವನ್ನು ಸದಸ್ಯರು ಕೈಗೊಂಡರು.

ಶಶಿಕಲಾ ನಟರಾಜನ್‌ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ  ಸ್ವೀಕರಿಸಲು ಇನ್ನೂ ಮನಸ್ಸು ಮಾಡದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ನಾಯತ್ವದ ಪ್ರಶ್ನೆ ಯಾವ ರೀತಿಯ ತಿರುವನ್ನು ಪಡೆದುಕೊಳ್ಳಬಹುದು ಎಂಬುದೀಗ ಕುತೂಹಲದ ಸಂಗತಿಯಾಗಿದೆ.

No Comments

Leave A Comment