Log In
BREAKING NEWS >
BJP ಅಂತಿಮ ಪಟ್ಟಿ ಪ್ರಕಟ, 4 ಕ್ಷೇತ್ರ ನಿಗೂಢ; ಶೋಭಾಗೂ ಟಿಕೆಟ್ ಇಲ್ಲ....ನೋಯ್ಡಾ : ಮಹಾ ಪಾತಕಿ ಬಾಲರಾಜ್‌ ಭಾಟಿ ಎನ್‌ಕೌಂಟರ್‌ಗೆ ಬಲಿ...

ಹಳೆನೋಟು ಇದ್ದರೆ ದಂಡ, 4 ವರ್ಷ ಜೈಲು: ಸುಗ್ರೀವಾಜ್ಞೆಗೆ ಸಂಪುಟ ಅಸ್ತು

cash-25ಹೊಸದಿಲ್ಲಿ: ಮಾರ್ಚ್‌ 31ರ ಅನಂತರ ರದ್ದಾದ 500, 1000 ರೂ. ನೋಟು ಗಳನ್ನು ಭಾರೀ ಸಂಖ್ಯೆಯಲ್ಲಿ ಇಟ್ಟುಕೊಳ್ಳುವುದು, ವರ್ಗಾಯಿಸುವುದು ಅಥವಾ ಸ್ವೀಕರಿಸುವುದು ಶಿಕ್ಷಾರ್ಹ ಅಪರಾಧ ಎಂಬ ಅಧ್ಯಾದೇಶವನ್ನು ಹೊರಡಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಚಲಾವಣೆ ಕಳೆದುಕೊಂಡಿರುವ 500, 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಇನ್ನು ಕೇವಲ 3  ದಿನಗಳಷ್ಟೇ ಬಾಕಿ ಉಳಿದಿವೆ. ಡಿ.30ರ ಬಳಿಕ ಕಠಿನ ನಿಯಮಾವಳಿಗಳನ್ನು ಪಾಲಿಸಿದರೆ ಆರ್‌ಬಿಐನಲ್ಲಷ್ಟೇ ಜಮೆ ಮಾಡಬಹು ದಾಗಿದೆ.

ಡಿ. 30ರ ಅನಂತರ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟು ಹೊಂದಿದ್ದರೆ 5,000 ರೂಪಾಯಿ ದಂಡ, ಎಲ್ಲಿಯಾದರೂ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ನೋಟುಗಳು ಸಿಕ್ಕರೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

ನ. 8ರಂದು 500 ಮತ್ತು 1000 ರೂ. ನೋಟುಗಳನ್ನು ಅಪಮೌಲ್ಯ ಮಾಡಿದ್ದ ಕೇಂದ್ರ ಸರಕಾರ, ನಿಷೇಧಿತ ನೋಟುಗಳನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಡಿ. 30ರ ವರೆಗೆ ಅವಕಾಶ ನೀಡಿದೆ. ಈ ಗಡುವು ಮುಗಿದ ಹಳೆಯ ನೋಟುಗಳನ್ನು ನೇರವಾಗಿ ರಿಸರ್ವ್‌ ಬ್ಯಾಂಕ್‌ನಲ್ಲಿ ಮಾ. 31ರ ವರೆಗೂ ಜಮೆ ಮಾಡಲು ಅವಕಾಶ ಕಲ್ಪಿಸಿದೆ.

No Comments

Leave A Comment