Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಆರ್ ಬಿಐ ಉಪ ಗವರ್ನರ್ ಆಗಿ ವಿರಳ್ ಆಚಾರ್ಯ ನೇಮಕ

viral-new

ಮುಂಬಯಿ: ನ್ಯೂಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ವಿರಳ್ ಆಚಾರ್ಯ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪ ಗವರ್ನರ್ ಆಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಆರ್ ಬಿ ಐ ನ ನಾಲ್ಕು ಉಪ ಗವರ್ನರ್ ಗಳಲ್ಲಿ ವಿರಳ್ ಆಚಾರ್ಯ ಕೂಡ ಒಬ್ಬರಾಗಿದ್ದು, ಮೂರು ವರ್ಷ ಇವರ ಅಧಿಕಾರ ಅವಧಿ ಇರುತ್ತದೆ. ಊರ್ಜಿತ್ ಪಟೇಲ್ ಆರ್ ಬಿ ಐ ಗವರ್ನರ್ ಆಗಿ ಬಡ್ತಿ ಹೊಂದಿದ ನಂತರ ತೆರವಾಗಿದ್ದ ಉಪ ಗವರ್ನರ್ ಹುದ್ದೆಗೆ ವಿರಳ್ ಆಚಾರ್ಯರನ್ನು ನೇಮಿಸಲಾಗಿದೆ.

ಊರ್ಜಿತ್ ಪಟೇಲ್ ಆರ್ ಬಿಐ ನ ಪ್ರಸಿದ್ಧ ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾಗಿದ್ದರು, ಆದರೆ ವಿರಳ್ ಆಚಾರ್ಯ ಅವರಿಗೆ ಯಾವ ಸ್ಥಾನ ನೀಡಲಾಗಿದೆ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸಿಲ್ಲ. ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಪ್ ಬ್ಯುಸಿನೆಸ್ ನಲ್ಲಿ  ಪ್ರೊಫೆಸರ್ ಆಗಿ  ಕೆಲಸ ಮಾಡುತ್ತಿದ್ದರು.

No Comments

Leave A Comment