Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಂಗಳೂರು: ಟ್ಯೂಷನ್ ಗೆ ಏಕೆ ಹೋಗಲಿಲ್ಲ? ಪ್ರಶ್ನಿಸಿದ್ದಕ್ಕೆ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಜಿಗಿದು ಬಾಲಕ ಸಾವು-

apart-mentಬೆಂಗಳೂರು: 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತಾನು ವಾಸವಿರುವ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆಪಿ ನಗರದ 7ನೇ ಹಂತದ ಅರಕೆರೆ ಬಳಿ ನಡೆದಿದೆ.

ಸಾಫ್ಟವೇರ್ ಸಂಸ್ಥೆಯ ಮಾಲೀಕರಾದ ಶ್ರೀನಿವಾಸ್ ಎಂಬುವರ ಪುತ್ರ ಕಾರ್ತಿಕ್ ಮೃತ ದುರ್ದೈವಿ, ಮಂಗಳವಾರ ರಾತ್ರಿ ಸುಮಾರು 8.30 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.ರಾತ್ರಿ ಮನೆಗೆ ಬಂದ ಶ್ರೀನಿವಾಸ್ ಮಗ ರೂಮಿನಲ್ಲಿದ್ದದ್ದನ್ನು ನೋಡಿ ಟ್ಯೂಷನ್ ಗೆ ಏಕೆ ಹೋಗಲಿಲ್ಲ ಎಂದು ಕೇಳಿದ್ದಾರೆ, ಕಾರ್ತಿಕ್ ತಾಯಿ ಶ್ರೀನಿವಾಸ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ವೇಳೆ ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. 

ಇದರಿಂದ ಅಸಮಾಧಾನಗೊಂಡ ಕಾರ್ತಿಕ್ ರೂಮಿನಿಂದ ಓಡಿ ಹೋಗಿ ಮನೆಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಕಾರ್ತಿಕ್ ಹಿಂದೆಯೇ ಆತನ ಪೋಷಕರು ಓಡಿದ್ದಾರೆ. ಅದರೆ ಅಷ್ಟರಲ್ಲಾಗಲೇ ಕಾರ್ತಿಕ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. 

ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.ಆಂಧ್ರಪ್ರದೇಶ ಮೂಲಕ ಶ್ರೀನಿವಾಸ್ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅಲಯನ್ಸ್ ವಿವಿ ಕಾಲೇಜಿನಲ್ಲಿ ಕಾರ್ತಿಕ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

No Comments

Leave A Comment