Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ಬಿಬಿಎಂಪಿ ವೆಬ್ ಸೈಟ್ ನಲ್ಲಿ ನಾಗರಿಕರಿಗೆ ಇನ್ನಷ್ಟು ಸೇವೆಗಳು

bbmp-serviceಬೆಂಗಳೂರು: ಹೆಚ್ಚಿನ ಇ-ಸೇವೆ ಒದಗಿಸುವ ಮರು ವಿನ್ಯಾಸಗೊಳಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಉದ್ಘಾಟಿಸಿದರು.

ಪ್ರಸ್ತುತ ಬಿಬಿಎಂಪಿ ಇ-ಸರ್ವಿಸ್ ನಲ್ಲಿ ಕಟ್ಟಡ ಅನುಮೋದನೆ ಯೋಜನೆ, ಆನ್ ಲೈನ್ ತೆರಿಗೆ ಪಾವತಿ ಮತ್ತು ಜಾಹೀರಾತು ತೆರಿಗೆಯನ್ನು ಒಳಗೊಂಡಿದೆ.

ಇಸ್ರೋ ಕೇಂದ್ರದ ಹೆಚ್ಚಿನ ರೆಸಲ್ಯೂಶನ್ ಉಪಗ್ರಹ ಮಾಹಿತಿಗಳ ಸಹಾಯದಿಂದ ಕಟ್ಟಡದ ಮತ್ತು ಇತರ ಆಸ್ತಿಗಳ ನೀಲನಕ್ಷೆಗಳನ್ನು ಸಂಗ್ರಹಿಸಲು ಬಿಬಿಎಂಪಿಗೆ ಸಹಾಯವಾಗಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ನಿನ್ನೆ ಒಪ್ಪಂದವೊಂದಕ್ಕೆ ಸಹಿ ಹಾಕಿದರು.

ಅಲ್ಲದೆ ಕಂದಾಯ ಅಧಿಕಾರಿಗಳು ಜಿಐಎಸ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಗಗನ್ ನ್ನು ದಾಖಲೆಗಳ ಸಂಗ್ರಹಕ್ಕೆ ಬಳಸಿಕೊಳ್ಳಲಿದೆ.

ಈ ಆಪ್ ನ್ನು ಬಳಸಿಕೊಂಡು ಕಂದಾಯ ಅಧಿಕಾರಿಗಳು ತೆರಿಗೆ ಕಟ್ಟದೆ ವಂಚಿಸುವವರನ್ನು ಪ್ರತಿ ವಾರ್ಡ್ ಮತ್ತು ವಲಯಗಳಲ್ಲಿ ಪರೀಕ್ಷಿಸಬಹುದು. ಪ್ರತಿ ವಿಭಾಗಗಳಲ್ಲಿ ತೆರಿಗೆ ವಂಚಿಸುವವರನ್ನು ಪರೀಕ್ಷಿಸುವ ಕಾರಣ ಸಂಗ್ರಹವಾದ ತೆರಿಗೆ ಮೊತ್ತ ಮತ್ತು ಬಾಕಿಯಿರುವ ಪಾವತಿ ವಿವರ ಸಿಗುತ್ತದೆ. ನಗರದ ನಿವಾಸಿಗಳು ಕೂಡ ಈ ಆಪ್ ನ್ನು ಬಳಸಿ ತೆರಿಗೆ ಪಾವತಿ ಬಾಕಿಯನ್ನು ಪರೀಕ್ಷಿಸಿ ತಾವು ಅಥವಾ ತಮ್ಮ ನೆರೆಹೊರೆಯವರು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂದು ತಿಳಿದುಕೊಳ್ಳಬಹುದು.

No Comments

Leave A Comment