Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು; ಇಬ್ಬರ ಸಾವು, 43ಮಂದಿಗೆ ಗಾಯ/Two killed as Ajmer-Sealdah express derails near Kanpur

ajmer-sಕಾನ್ಪುರ: ಮತ್ತೊಂದು ರೈಲು ದುರಂತಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದ್ದು, ಕಾನ್ಪುರ ಬಳಿ ಕಾನ್ಪುರ-ಸೀಲ್ಡಹ್ ಎಕ್ಸ್ ಪ್ರೆಸ್ ಹಳಿ ತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 43ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು  ಗಾಯಗೊಂಡಿದ್ದಾರೆ.

ಕಾನ್ಪುರ-ಸೀಲ್ಡಹ್ ಎಕ್ಸ್ ಪ್ರೆಸ್ ನ ಒಟ್ಟು 15 ಬೋಗಿಗಳು ಹಳಿ ತಪ್ಪಿದ್ದು, ಕಾನ್ಪುರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಕಾಲುವೆ ಅಡ್ಡಲಾಗಿ ಕಟ್ಟಲಾಗಿದ್ದ ರೈಲ್ವೇ ಸೇತುವೆ ದಾಟುತ್ತಿದ್ದಂತೆಯೇ ರೈಲು ಹಳಿ ತಪ್ಪಿದೆ ಎಂದು  ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು. 43ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 5 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ  ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾನ್ಪುರಕ್ಕೆ ತೆರಳುತ್ತಿದ್ದ ರೈಲು ಇಂದು ಬೆಳಗ್ಗೆ ಸುಮಾರು 6 ಗಂಟೆ ಹೊತ್ತಿನಲ್ಲಿ ಕಾಲುವೆ ಸೇತುವೆಯನ್ನು ದಾಟುತ್ತಿತ್ತು. ದಟ್ಟ ಮಂಜು ಆವರಿಸಿದ್ದರಿಂದ ಮುಂದಿನ ಹಳಿಗಳು ಅಷ್ಟಾಗಿ ಗೋಚರಿಸುತ್ತಿರಲಿಲ್ಲ ಎಂದು ಪ್ರಯಾಣಿಕರೊಬ್ಬರು  ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ಅಗ್ನಿ ಶಾಮಕ ದಳದ ಅಧಿಕಾರಿಗಳು ಕೂಡ ರೈಲ್ವೇ ಪೊಲೀಸರಿಗೆ ಸಾಥ್ ನೀಡುತ್ತಿದ್ದು, ರಕ್ಷಣಾ ಕಾರ್ಯಾಚರಣೆ  ಭರದಿಂದ ಸಾಗಿದೆ.

Kanpur: At least 2 persons were killed and 43 others injured when 15 coaches of the Ajmer-Sealdah express train derailed this morning near Rura railway station in Kanpur dehat district.

The incident took place around 6 AM near Rura railway station, 70 km from here, when the train was crossing a bridge overhead a dry canal in the area, Northern Central Railways PRO Amit Malviya said.

Two persons were killed and 43 injured in the mishap when 13 sleeper and 2 general coaches of the train, 12987 Ajmer-Sealdah express, derailed, IG (Kanpur range) Zaki Ahmed said.

Rescue and relief operations have been started at the accident spot with the district health department dispatching 14 ambulances and relief teams from Kanpur and Tundla, he said.

Buses have also been plied to drop the stranded passengers from the spot to Kanpur railway station.

The Delhi-Howrah route via Kanpur has been temporarily closed and the Shatabdi express from Delhi to Kanpur has been cancelled, Malviya said.

“A rescue team has rushed to the spot and a medical relief train from Kanpur has also been sent to the accident site.

Currently we are focusing on relief and rescue operations,” Railway spokesperson Anil Saxena said.

The Railways have issued the helpline numbers for Kanpur — 0512-2323015, 2323016, 2323018 and for Allahabad — 0532-2408149, 2408128.

No Comments

Leave A Comment