Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಗುಜರಾತ್‌ನಲ್ಲಿ 26 ಲಕ್ಷ ಮೌಲ್ಯದ ನಕಲಿ ಹೊಸ ನೋಟು ವಶ: ಇಬ್ಬರ ಬಂಧನ

notesರಾಜ್ಕೋಟ್: ಗುಜರಾತ್ ನ ರಾಜ್ಕೋಟ್ ನಲ್ಲಿ 26 ಲಕ್ಷ ಮೌಲ್ಯದ 500 ಮತ್ತು 2000 ರುಪಾಯಿಯ ಹೊಸ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಕ್ರೈಂ ಬ್ರಾಂಚ್ ಪೊಲೀಸರು ಹನುಮಾನ್ ಮೇದಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಇಬ್ಬರು ಖತರ್ನಾಖ್ ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 26 ಲಕ್ಷ ರುಪಾಯಿ ಮೌಲ್ಯದ 2000 ನಕಲಿ ನೋಟು ಮತ್ತು 10 ಸಾವಿರ ರುಪಾಯಿ ಮೌಲ್ಯದ 500 ಮುಖಬೆಲೆಯ ನಕಲಿ ನೋಟುಗಳನ್ನು ಇಟ್ಟುಕೊಂಡಿದ್ದರು.

ಬಂಧಿತ ಆರೋಪಿಗಳನ್ನು ಅಹಮದಾಬಾದ್ ನ ಹೃದಯ್ ಜಗಣಿ ಮತ್ತು ಲಕ್ಷ್ಮಣ್ ಚೌಹಾಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ನೋಟುಗಳನ್ನು ತಮ್ಮ ಕಾರಿನ ಸ್ಪೀಕರ್ ಒಳಗೆ ಅಡಗಿಸಿಟ್ಟಿದ್ದರು.

No Comments

Leave A Comment