Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಗೋವಾ: ರನ್ ವೇಯಲ್ಲಿ ಜಾರಿದ ಜೆಟ್ ಏರ್ ವೇಸ್ ವಿಮಾನ, ಪ್ರಯಾಣಿಕರು ಸುರಕ್ಷಿತ

33ಪಣಜಿ:  ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ಗೋವಾದಿಂದ ಮುಂಬೈಗೆ ಹೊರಟಿದ್ದ 9 ಡಬ್ಲ್ಯು 2374 ಜೆಟ್ ಏರ್ ವೇಸ್ ವಿಮಾನ ರನ್ ವೇಯಲ್ಲಿ ಹಠಾತ್ತನೆ ಜಾರಿದ ಘಟನೆ ಇಂದು ಬೆಳಗಿನ ಜಾವ 4.45ರ ಸುಮಾರಿಗೆ ನಡೆದಿದೆ.

ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ವಿಮಾನದಲ್ಲಿ ಏಳು ಮಂದಿ ಸಿಬ್ಬಂದಿ ಹಾಗೂ 151 ಮಂದಿ ಪ್ರಯಾಣಿಕರು ಇದ್ದರು.ವಿಮಾನದಿಂದ ಕೆಳಗಿಳಿಸುವಾಗ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಉಳಿದವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.jet-accident

ವಿಮಾನಕ್ಕೆ ಕೂಡ ಸಣ್ಣ  ಪ್ರಮಾಣದಲ್ಲಿ ಹಾನಿಯಾಗಿದೆ. ಗಾಯಗೊಂಡ 15 ಮಂದಿ ಪ್ರಯಾಣಿಕರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ 360 ಡಿಗ್ರಿಯಲ್ಲಿ  ರನ್ ವೇಯಲ್ಲಿ ಜಾರಿತು. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ.

ಪ್ರಯಾಣಿಕರಿಗೆ ಅನನುಕೂಲವಾಗದಂತೆ ಬದಲಿ ವಿಮಾನದ ವ್ಯವಸ್ಥೆಯನ್ನು  ಮಾಡಲಾಗುವುದು. ವಿಮಾನ ನಿಲ್ದಾಣ  ಕೂಡಲೇ ಸಹಜ ಸ್ಥಿತಿಗೆ ಬರಲು  ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯ ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.

ವಿಮಾನ ಅಪಘಾತ ತನಿಖಾ ವಿಭಾಗ ಜೆಟ್ ಏರ್ ವೇಸ್ ಅಪಘಾತದ ತನಿಖೆ ನಡೆಸಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ತಪಾಸಣೆ ಕೈಗೊಂಡಿದೆ. ಹಂಸಾ ರನ್ ವೇಯಲ್ಲಿ ವಿಮಾನ ಟೇಕ್ ಆಫ್ ಆಗುವಾಗ ಜಾರಿದ್ದು ಬೆಳಗ್ಗೆ 9 ಗಂಟೆ ವೇಳೆಗೆ ಸಂಚಾರಕ್ಕೆ ಬಳಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

No Comments

Leave A Comment