Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ರಾಷ್ಟ್ರ ಲಾಂಛನ ಚಿತ್ರಿಸಿದ್ದ ದೀನನಾಥ್ ಭಾರ್ಗವ ವಿಧಿವಶ

emblem-dinanathಇಂದೋರ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ದೀನನಾಥ ಭಾರ್ಗವ ಅವರು ವಿಧಿವಶರಾಗಿದ್ದಾರೆ.

ರಾಷ್ಟ್ರ ಲಾಂಛನವಾಗಿ ಸಾರನಾಥನ ಸಿಂಹ ಬೋದಿಗೆ ಅಶೋಕ ಚಕ್ರವನ್ನು ವಿನ್ಯಾಸಗೊಳಿಸಿದ್ದ ಕಲಾವಿದ 89 ವರ್ಷದ ದೀನನಾಥ ಭಾರ್ಗವ ಅವರು ಇಂದೋರ್ ನಲ್ಲಿ ವಿಧಿವಶರಾಗಿದ್ದಾರೆ. ಭಾರ್ಗವ ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1927ರ ನವೆಂಬರ್ 1 ರಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮುಲ್ತಾಯಿಯಲ್ಲಿ ಭಾರ್ಗವ ಅವರು ಜನಿಸಿದ್ದರು. ಶಾಂತಿನಿಕೇತನ ಕಲಾಭವನದ ಪ್ರಾಂಶುಪಾಲರಾಗಿದ್ದ ಖ್ಯಾತ ಕಲಾವಿದ ನಂದಲಾಲ್ ಬೋಸ್ ಅವರು ಭಾರತೀಯ ಸಂವಿಧಾನದ ಕರಡು ಪ್ರತಿಯ ಪುಟ ವಿನ್ಯಾಸಗೊಳಿಸುವ ತಂಡಕ್ಕೆ ಆಯ್ಕೆ ಮಾಡಿದ್ದರು.

ದೀನನಾಥ ಭಾರ್ಗವ ಅವರು ರಚಿಸಿದ್ದ ರಾಷ್ಟ್ರೀಯ ಲಾಂಛನವನ್ನು ಸರ್ಕಾರ 1950ರ ಜನವರಿ 2ರಂದು ಅಳವಡಿಸಿಕೊಂಡಿತ್ತು.

No Comments

Leave A Comment