Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ಬಾಲಿವುಡ್‌ ಸಂಗೀತ ನಿರ್ದೇಶಕ ಸೋದರ ಜೋಡಿ ಸಾಜಿದ್‌-ವಾಜಿದ್‌ ಬಿಜೆಪಿಗೆ

sajjid-wajid-700ಮುಂಬಯಿ: ಬಾಲಿವುಡ್‌ನ‌ ಸಂಗೀತ ನಿರ್ದೇಶಕ ಸೋದರ-ಜೋಡಿಯಾಗಿರುವ ಸಾಜಿದ್‌ ಮತ್ತು ವಾಜಿದ್‌ ಅಲಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರ ಸಮಕ್ಷಮದಲ್ಲಿ ಇಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವಾದ ನಿನ್ನೆ ಭಾನುವಾರ ಬಿಜೆಪಿಯ ಯುವ ದಳ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಸೋದರ ಜೋಡಿ ಬಿಜೆಪಿಯನ್ನು ಅಧಿಕೃತವಾಗಿ ಸೇರಿಕೊಂಡಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಫ‌ಡ್ನವೀಸ್‌ ಮಾತನಾಡುತ್ತಾ “ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡುವ ಪ್ರತಿಜ್ಞೆಯನ್ನು ನಾವು ಅಟಲ್‌ಜೀ ಅವರ ಈ ಹುಟ್ಟುಹಬ್ಬದ ದಿನದಂದು ಕೈಗೊಳ್ಳಬಹುದಾಗಿದೆ. ಅಟಲ್‌ಜೀ ಅವರು ತಮ್ಮ ಬದುಕಿನ ಉದ್ದಕ್ಕೂ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಕಠಿನ ಪರಿಶ್ರಮ ನಡೆಸಿದರು. ಅದೇ ರೀತಿ ಈಗ ಪ್ರಧಾನಿ ಮೋದಿ ಅವರು ಅಟಲ್‌ಜೀ ಅವರ ಕನಸನ್ನು ನನಸು ಮಾಡುವುದಕ್ಕೆ ಪರಿಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

No Comments

Leave A Comment