Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಚಿಲಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲು

chile-quakeಸ್ಯಾಂಟಿಯಾಗೋ: ದಕ್ಷಿಣ ಚಿಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದೆ.

ದಕ್ಷಿಣ ಚಿಲಿಯ ಕ್ವೆಲಾನ್ ಪ್ರಾಂತ್ಯದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಚಿಲಿಯ ಹಲವು ಕರಾವಳಿ ತೀರ ಪ್ರದೇಶದಲ್ಲಿ ಹವಾಮಾನ ಇಲಾಖೆ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.

ಆದರೆ ಈ ವರೆಗೂ  ಭೂಕಂಪನದಿಂದ ಸಾವು-ನೋವಾದ ಕುರಿತು ವರದಿಗಳಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಚಿಲಿಯ ಕರಾವಳಿ ತೀರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮುಚ್ಚಲಾಗಿದ್ದು, ಕರಾವಳಿ ತೀರ ಪ್ರದೇಶದಲ್ಲಿರುವ ಲಕ್ಷಾಂತರ  ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗುತ್ತಿದೆ.

ಪ್ರಬಲ ಭೂಕಂಪನದಿಂದ ಚಿಲಿಯ ಪ್ರಮುಖ ವಿದ್ಯುತ್ ಘಟಕಕ್ಕೆ ಹಾನಿಯಾಗಿದ್ದು ಕರಾವಳಿ ತೀರದ ಸುಮಾರು 21 ಸಾವಿರ ಮನೆಗಳು ಇದೀಗ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಚಿಲಿಯ ಹವಾಮಾನ ಇಲಾಖೆ ಸಮುದ್ರದಲ್ಲಿನ  ಬೆಳವಣಿಗೆಗಳನ್ನು ಪರಿಶೀಲಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾವಳಿ ತೀರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಭೂಕಂಪನ  ಸಂಭವಿಸಿರುವ ಕ್ವೆಲಾನ್ ಪ್ರದೇಶ ಪ್ರವಾಸಿ ತಾಣವಾಗಿದ್ದು, ಇಲ್ಲಿ ಹಲವಾರು ಸುಂದರ ದ್ವೀಪಗಳಿವೆ. ಹೀಗಾಗಿ ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ.

No Comments

Leave A Comment