Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ : 25 ಮಂದಿ ಜಖಂ

sabarimala-sಶಬರಿಮಲೆ, ಕೇರಳ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಭಾನುವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ದುರದೃಷ್ಟಕರ ಪ್ರಕರಣದಲ್ಲಿ ಕನಿಷ್ಠ 25 ಮಂದಿ ಭಕ್ತಾದಿಗಳು ಗಾಯಗೊಂಡರು.

ಅಪಾರ ಸಂಖ್ಯೆಯ ಯಾತ್ರಿಕರು ಭಾನುವಾರದಂದು ನಡೆಯಲಿದ್ದ  ಅಯ್ಯಪ್ಪ ದೇವರು ಧರಿಸುವ ಆಭರಣಗಳ “ತಂಗ ಅಂಗಿ’ ಮೆರವಣಿಗೆಯಲ್ಲಿ ಹಾಗೂ ಸೋಮವಾರ ನಡೆಯಲಿದ್ದ ಮಂಡಲ ಪೂಜೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನಕ್ಕೆ ಬಂದಿದ್ದರು.

ಪರಿಣಾಮವಾಗಿ ಈ ವಿಧ್ಯುಕ್ತ ವಿಧಿಗಳಲ್ಲಿ ನೂಕುನುಗ್ಗಲು ಉಂಟಾಯಿತು. ಸನ್ನಿಧಾನಂ ಮತ್ತು ಮಕರಪುರಂ ನಡುವೆ ಸಂಭವಿಸಿದ ನೂಕುನಗ್ಗಲಿನಲ್ಲಿ ಸಿಲುಕಿ ಸುಮಾರು 20 ಮಂದಿ ಗಾಯಗೊಂಡರು.

ಗಾಯಾಳುಗಳನ್ನು ಸನ್ನಿಧಾನಂ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಆರ್‌ ಗಿರಿಜಾ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ತಂಗಿ ಅಂಗಿಯನ್ನು ದೇವಳಕ್ಕೆ ತರುತ್ತಲೇ ಯಾತ್ರಿಕರ ವಿಪರೀತ ನೂಕು ನುಗ್ಗಲು ಉಂಟಾಯಿತೆಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ. ನೂಕುನುಗ್ಗಲು ಸಂಭವಿಸುವುದಕ್ಕೆ ಸ್ವಲ್ಪ ಮುನ್ನ ಅವರು ದೇವಳದ ಒಳಗೆ ಇದ್ದರು. ದೀಪಾರಾಧನೆಯ ಬಳಿಕ ಅವರು ತಂಗ ಅಂಗಿ ಜತೆಗೆ ಸ್ಥಳದಿಂದ ನಿರ್ಗಮಿಸಿದ್ದರು.

ಈ ಘಟನೆಯನ್ನು ಅನುಸರಿಸಿ ಪೊಲೀಸರೀಗ ಬೆಟ್ಟದಿಂದ ಬುಡವಾದ ಪಂಬ ನಿಂದ ಸನ್ನಿಧಾನಕ್ಕೆ ಹೋಗುವ ಯಾತ್ರಿಕರ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದಾರೆ. ಅಲ್ಲಿಯೂ ಪ್ರಯಾಣಿಕರ ವಿಪರೀತ ನೂಕುನುಗ್ಗಲು ಇದೆ.

No Comments

Leave A Comment