Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹಿರಿಯ ನ್ಯಾಯವಾದಿ ಬಿ ವಿ ಆಚಾರ್ಯ ರಿಗೆ ” ಸಮಾಜರತ್ನ “ಪುರಸ್ಕಾರ

dsc01553ಉಡುಪಿ:ನಾಡಿನ ಹಿರಿಯ ನ್ಯಾಯವಾದಿ 50ಕ್ಕೂ ಹೆಚ್ಚು ವರ್ಷಗಳಿಂದ ನಾಡಿಗೆ ನ್ಯಾಯಾಂಗ ಸೇವೆ ಸಲ್ಲಿಸುತ್ತಿರುವ ಬೆಳಪು ವಾಸುದೇವ ಆಚಾರ್ಯರಿಗೆ ಪರ್ಯಾಯ ಶ್ರೀ ಪೇಜಾವರ ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶನಿವಾರ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ” ಸಮಾಜರತ್ನ “ಎಂಬ ಅಭಿದಾನ ದೊಂದಿಗೆ ಸಂಮಾನಿಸಿ ಅನುಗ್ರಹಿಸಿದರು.ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು ” ಐದು ದಶಕಗಳಿಂದ ಆಚಾರ್ಯರಿಂದ ನಾಡಿಗೆ ಅಮೂಲ್ಯ ನ್ಯಾಯಾಂಗ ಸೇವೆ ಸಂದಿದೆ.ಅನೇಕ ವಿಶೇಷ ಪ್ರಕರಣಗಳಲ್ಲಿ ಸರಕಾರಿ ಅಭಿಯೋಜಕರಾಗಿ ,ವಿವಿಧ ಕಾನೂನು ಆಯೋಗಗಳ ಸದಸ್ಯರಾಗಿ ಐದು ಬಾರಿ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ಸರಕಾರಕ್ಕೆ ಮತ್ತು ಸಮಾಜಕ್ಕೆ ಆಚಾರ್ಯರು ನೀಡಿದ ಮಾರ್ಗದರ್ಶನ ಅಭಿನಂದನಾರ್ಹ ” ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು ಆಚಾರ್ಯರ ಬಹುಮುಖಿ ನ್ಯಾಯಾಂಗ ಸೇವೆಯನ್ನು ವಿವರಿಸಿದರು.ಶ್ರೀಮತಿ ಲಕ್ಷ್ಮೀ ಆಚಾರ್ಯ ಮತ್ತು ಅಶೋಕ್ ಹಾರ್ನಳ್ಳಿಯವರನ್ನೂ ಶ್ರೀಪಾದರು ಸಂಮಾನಿಸಿದರು.

ದಿವಾನ ರಘುರಾಮಾಚಾರ್ಯ , ವಕೀಲ ಪ್ರದೀಪ್ ರಾವ್ ಉಪಸ್ಥಿತರಿದ್ದರು.

No Comments

Leave A Comment