Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಬಿಜೆಪಿ ಮುಖಂಡನಿಗೆ ಬಿತ್ತು ಗೂಸಾ

venkatesh_bjp_leader_760x400ಬೆಂಗಳೂರು (ಡಿ.24): ಮಾಜಿ ಸಚಿವ ಎಚ್ ವೈ ಮೇಟಿ ಕಾಮಪುರಾಣ ಇನ್ನೂ ಮಾಸಿಲ್ಲ. ಈ ನಡುವೆ ಬಿಜೆಪಿ ಮುಖಂಡನೋರ್ವ ಪೊಲೀಸ್ ಕ್ವಾಟ್ರಸ್‌ನಲ್ಲಿ  ಸಿಕ್ಕಿಬಿದ್ದಿದ್ದಾನೆ. ಪೊಲೀಸಪ್ಪನ ಪತ್ನಿಯೇ ಜೊತೆ ಕಾಮದಾಟ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇದರಿಂದ ಮುಜುಗರಕ್ಕೊಳಗಾದ ಕ್ವಾಟ್ರಸ್ ನಿವಾಸಿಗಳು, ಅವರಿಬ್ಬಗೆ ಗೂಸಾ ಕೊಟ್ಟು ಪೊಲೀಸ್ ಠಾಣೆಗೆ ಎಳೆದುತಂದಿದ್ದಾರೆ.

ಪೊಲೀಸ್ ಕ್ವಾಟ್ರಸ್ ಅಂದರೆ ಸುರಕ್ಷಿತವಾಗಿರೋ ಪ್ರದೇಶ ಅಂದ್ಕೊಂಡಿರುವತ್ತೇವೆ. ಆದರೆ ಅಲ್ಲೇ ಈ ರೀತಿ ನಡೆದರ? ಪೊಲೀಸ್ ಕ್ವಾಟ್ರಸ್‌’ಗೆ ನುಗ್ಗಿದಲ್ಲದೆ, ಪೊಲೀಸನ ಹೆಂಡತಿಯ ಜೊತೆಯೇ ಲವ್ವಿಡವ್ವಿ ನಡೆಸಿರುವ ಘಟನೆ ಬೆಂಗಳೂರಿನ ನಂದಿನಿ‌ ಲೇಔಟ್ ನಲ್ಲಿ ನಡೆದಿದೆ.

ಬಿಜೆಪಿ ಮುಖಂಡನ ಹೆಸರು ವೆಂಕಟೇಶ್, ಈತನ ಕಾಮಕೇಳಿ ಆಟಕ್ಕೆ ಸಾಥ್ ನೀಡ್ತಿದ್ದವಳು ಚಂದ್ರಕಲಾ.  ಚಂದ್ರಕಲಾ, ಎಸಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಪತ್ನಿ. ವೆಂಕಟೇಶ್ ಜೊತೆಗೆ ಪತ್ನಿಯ ಲವ್ವಿಡವ್ವಿ ಗೊತ್ತಿದ್ದರೂ ಕೃಷ್ಣಮೂರ್ತಿ ಸುಮ್ಮನಿದ್ದಂತೆ. ಆದರೆ ಇವರಿಬ್ಬರ ಈ ವರ್ತನೆ ಪೊಲೀಸ್ ಕ್ವಾಟ್ರಸ್ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಯಾವಾಗ  ಕ್ವಾಟ್ರಸ್’ನ ಮೆಟ್ಟಿಲು, ಕಾರಿಡಾರ್‌ಗಳಲ್ಲಿ ಇವರಿಬ್ಬರ ಅಸಭ್ಯ ವರ್ತನೆ ಶುರುವಾಯ್ತೋ, ನಿವಾಸಿಗಳಿಗೆ ಓಡಾಡದಂತಹ ಪರಿಸ್ಥಿತಿ ಎದುರಾಯ್ತು. ಪ್ರಶ್ನಿಸಲು ಹೋದವರಿಗೆ, ನೋಡಕ್ಕಾಗದಿದ್ದರೇ ಕಣ್ ಮುಚ್ಚಿಕೊಳ್ಳಿ ಎಂಬ ಅಹಂಕಾರದ ಮಾತುಗಳನ್ನಾಡುತ್ತಿದ್ದರಂತೆ.

ನಿನ್ನೆ ರಾತ್ರಿಯೂ  ಪ್ರಶ್ನಿಸಲು ಹೋದವರಿಗೆ ಮತ್ತದೇ ಅಹಂಕಾರದ ಮಾತುಗನ್ನಾಡಿದ್ದಾರೆ. ಇದರಿಂದ  ರೋಸಿ ಹೋದ ಪೊಲೀಸ್ ಕ್ವಾಟ್ರಸ್ ಸಿಬ್ಬಂದಿ,  ಏಕಾಏಕಿ ಅವರಿಬ್ಬರನ್ನ ಥಳಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಇನ್ನೂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್, ಕ್ವಾರ್ಟಸ್‌ಗಳ ನಿವಾಸಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರಂತೆ. ಇದರಿಂದ ರೋಸಿಹೋದ ಕ್ವಾರ್ಟಸ್ ನಿವಾಸಿಗಳು, ಪೊಲೀಸರ ವಿರುದ್ಧವೇ ತಿರುಗಿಬಿದ್ದರು ಎನ್ನಲಾಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

No Comments

Leave A Comment